ಚೆನ್ನೈ (ಅ.10): ಅನಾರೋಗ್ಯದಿಂದ ಆಸ್ಪತ್ರೆ ಸೇರಿದಿರುವ ತಮಿಳುನಾಡು ಸಿಎಂ ಜಯಲಲಿತಾರನ್ನು ಹೋರಾಟಗಾರ್ತಿ ಎಂದು ಬಿಜೆಪಿ ಮುಖಂಡ ವೆಂಕಯ್ಯನಾಯ್ಡು ವರ್ಣಿಸಿದ್ದಾರೆ.  ತಮಿಳುನಾಡು ಜನರಿಗೆ ತಮ್ಮ ಸೇವೆಯನ್ನು ಜಯಾ ಮುಂದುವರೆಸುತ್ತಾರೆ ಎಂದಿದ್ದಾರೆ.

ಜಯಲಲಿತಾ ದಾಖಲಾಗಿರುವ ಅಪೋಲೋ ಆಸ್ಪತ್ರೆಗೆ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯನಾಯ್ಡು ನಿನ್ನೆ ಭೇಟಿ ನೀಡಿ ಅಮ್ಮಾ ಆರೋಗ್ಯ ವಿಚಾರಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯಂತರ ಸಿಎಂ ಹೆಸರನ್ನು ಸೂಚಿಸಿ ಎನ್ನುವ ಡಿಎಂಕೆ ಬೇಡಿಕೆಯನ್ನು ಎಐಡಿಎಂಕೆ ತಳ್ಳಿಹಾಕಿದೆ.