ಶ್ರೀನಗರ[ಜು. 30]  ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನೆ ಮಂಗಳವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.  ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ಭಾರತದ ಒಬ್ಬ ಯೋಧ ಹುತಾತ್ಮರಾಗಿದ್ದಾರೆ.

ರಾಜೌರಿ ಜಿಲ್ಲೆಯ ಸುಂದರ್​ಬಾನಿ ಸೆಕ್ಟರ್ ನ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ಭಾರತೀಯ ಯೋಧ 34 ವರ್ಷದ  ನಾಯಕ್  ಕೃಷನ್ ಲಾಲ್ ಅವರು ಹುತಾತ್ಮರಾಗಿದ್ದಾರೆ.

ತಂಗಧರ್-ಕೇರಾನ್ ಭಾಗದಲ್ಲಿ ಪ್ರತಿ ಏಟು ನೀಡಿರುವ ಭಾರತೀಯ ಸೇನೆ ಇಬ್ಬರು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇಂಥ ಅಪ್ರಚೋದಿತ ದಾಳಿಗಳು ನಿರಂತರವಾಗಿ ನಡೆಯುತ್ತಲೆ ಇವೆ. ನಮ್ಮ ಸೈನ್ಯ ಅದೆಲ್ಲದಕ್ಕೂ ತಕ್ಕ ಉತ್ತರ ನೀಡಿಕೊಂಡೆ ಬಂದಿದೆ.