ಶ್ರೀನಗರದ ಪಂಥಾ ಚೌಕ್’ನಲ್ಲಿ ಲಷ್ಕರೆ ತೊಯ್ಬಾ ಉಗ್ರಗಾಮಿಗಳು ಭಾರತೀಯ ಸೈನಿಕರ ಮೇಲೆ ಗುಂಡು ಹಾರಿಸಿದ್ದು, ಒಬ್ಬ ಯೋಧ ಮೃತಪಟ್ಟಿದ್ದು, ಐವರು ಯೋಧರು ಗಾಯಗೊಂಡಿದ್ದಾರೆ.

ನವದೆಹಲಿ (ಸೆ.01): ಶ್ರೀನಗರದ ಪಂಥಾ ಚೌಕ್’ನಲ್ಲಿ ಲಷ್ಕರೆ ತೊಯ್ಬಾ ಉಗ್ರಗಾಮಿಗಳು ಭಾರತೀಯ ಸೈನಿಕರ ಮೇಲೆ ಗುಂಡು ಹಾರಿಸಿದ್ದು, ಒಬ್ಬ ಯೋಧ ಮೃತಪಟ್ಟಿದ್ದು, ಐವರು ಯೋಧರು ಗಾಯಗೊಂಡಿದ್ದಾರೆ.

ಇನ್ನೊಂದು ಕಡೆ ಕಾಶ್ಮೀರ ಗಡಿ ರೇಖೆಯಲ್ಲಿ ಪಾಕ್ ಸೇನೆ ಹಾರಿಸಿದ ಗುಂಡಿಗೆ ಬಿಎಸ್’ಎಫ್ ಸಬ್-ಇನ್ಸ್’ಪೆಕ್ಟರ್ ಬಲಿಯಾಗಿದ್ದಾರೆ.

ಪಂಥಾ ಚೌಕ್’ನಲ್ಲಿ ಸೇನಾ ವಾಹನದ ಮೇಲೆ ಉಗ್ರಗಾಮಿಗಳು ಗುಂಡು ಹಾರಿಸಿದ್ದಾರೆ. ಲಷ್ಕರೆ ತೊಯ್ಬಾ ಘಟನೆಯ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಹೇಳಿದೆ. ಭದ್ರತಾ ಪಡೆಗಳು ಬಿಗಿ ಭದ್ರತೆ ಒದಗಿಸಿದ್ದಾರೆ.