Asianet Suvarna News Asianet Suvarna News

ಜನಾರ್ದನ ರೆಡ್ಡಿಯ 100 ಕೋಟಿ ಕಪ್ಪು ಹಣ ವೈಟ್ ಆಯಿತಾ?: ಭೂ ಸ್ವಾಧೀನ ಇಲಾಖೆಯ ಕಾರ್ ಚಾಲಕನ ಡೆತ್ನೋಟ್ ಬಿಚ್ಚಿಟ್ಟ ರಹಸ್ಯ..!

ರಮೇಶ್ ಗೌಡ ವಸತಿ ಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಈತ ಮಂಡ್ಯದ ಕಾಡುಕೊತ್ತನಹಳ್ಳಿ ನಿವಾಸಿ. ಬೆಂಗಳೂರಿನ ವಿಶೇಷ ಭೂಸ್ವಾಧಿನ ಇಲಾಖೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ  ಈತ ಮಂಡ್ಯದ ಮೈ ಷುಗರ್ ಕಾರ್ಖಾನೆ ಎಂ.ಡಿ. ಕಾರ್ ಚಾಲಕನಾಗಿದ್ದು, ನಂತರ ಬೆಂಗಳೂರಿನ ವಿಶೇಷ ಭೂ ಸ್ವಾಧೀನ ಇಲಾಖೆಗೆ ವರ್ಗಾವಣೆಯಾಗಿ ಅಲ್ಲಿನ ಅಧಿಕಾರಿ ಭೀಮನಾಯ್ಕ ನ ಕಾರ್ ಚಾಲಕನಾಗಿ ಕೆಲಸ ಮಾಡ್ತಿರ್ತಾನೆ. ಇತ್ತಿಚೆಗೆ ಬ್ಲಾಕ್ ಮನಿ ವೈಟ್ ಮಾಡೋ ವಿಚಾರದಲ್ಲಿ ಹಣಕಾಸು ವಿಚಾರದಲ್ಲಿ ಸ್ವಲ್ಪ ಏರುಪೇರಾಗಿ 8 ಲಕ್ಷ ಹೆಚ್ಚು ಕಡಿಮೆಯಾಗಿ ಅಧಿಕಾರಿ‌ ಮತ್ತು ಕಾರ್ ಚಾಲಕನ ನಡುವೆ ಹೇರು ಪೇರಾದ ಹಣದ ವಿಚಾರದಲ್ಲಿ ಕಲಹವಾಗಿದ್ದು ಭೀಮನಾಯ್ಕ್ ಸೇರಿದಂತೆ ಆತನ ಖಾಸಗಿ ಕಾರ್ ಚಾಲಕ ಅಹಮದ್ ಎಂಬುವರು ಹಣವನ್ನು ಏರುಪೇರಾದ ಹಣ ವಾಪಸ್ಸು ಕೊಡುವಂತೆ ಧಮಕಿ ಹಾಕಿದ್ದಲ್ಲದಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ನಿನ್ನೆ ಮದ್ದೂರಿ ಕೊಪ್ಪ ಸರ್ಕಲ್ ಬಳಿ ಇರುವ ಸಮೃದ್ಧಿ ಲಾಡ್ಜ್ 'ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Janardhana Reddys Black Money Deal Secret Revealed Through A Death note

ಮಂಡ್ಯ(ಡಿ.07): ನಿನ್ನೆ ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರಿನ ವಸತಿ ಗೃಹವೊಂದರಲ್ಲಿ ಬೆಂಗಳೂರಿನ ವಿಶೇಷ ಭೂ ಸ್ವಾಧೀನ  ಇಲಾಖೆಯ ಕಾರ್ ಚಾಲಕನೋರ್ವ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರ  ಜೊತೆಗೆ ತನ್ನ ಸಾವಿಗೆ ಇಲಾಖೆಯ ಮೇಲಾಧಿಕಾರಿ ಹಾಗೂ ಆತನ ಖಾಸಗಿ ಕಾರ್ ಚಾಲಕ ನೀಡಿರುವ ಮಾನಸಿಕ ಕಿರುಕುಳ ಮತ್ತು ಕೊಲೆ ಬೆದರಿಕೆ ಕಾರಣ ಅಂತ ನಮೂದಿಸಿದಲ್ಲದೆ. ಆತ ಬರೆದಿರುವ ಡೆತ್ ನೋಟ್'ನಲ್ಲಿ ತನ್ನ ಮೇಲಧಿಕಾರಿಯ ಭ್ರಷ್ಟಾಚಾರವನ್ನು ಇಂಚಿಂಚು ಬರೆದಿಟ್ಟಿದ್ದಾನೆ.

ರಮೇಶ್ ಗೌಡ ವಸತಿ ಗೃಹದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಈತ ಮಂಡ್ಯದ ಕಾಡುಕೊತ್ತನಹಳ್ಳಿ ನಿವಾಸಿ. ಬೆಂಗಳೂರಿನ ವಿಶೇಷ ಭೂಸ್ವಾಧಿನ ಇಲಾಖೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಹಿಂದೆ  ಈತ ಮಂಡ್ಯದ ಮೈ ಷುಗರ್ ಕಾರ್ಖಾನೆ ಎಂ.ಡಿ. ಕಾರ್ ಚಾಲಕನಾಗಿದ್ದು, ನಂತರ ಬೆಂಗಳೂರಿನ ವಿಶೇಷ ಭೂ ಸ್ವಾಧೀನ ಇಲಾಖೆಗೆ ವರ್ಗಾವಣೆಯಾಗಿ ಅಲ್ಲಿನ ಅಧಿಕಾರಿ ಭೀಮನಾಯ್ಕ ನ ಕಾರ್ ಚಾಲಕನಾಗಿ ಕೆಲಸ ಮಾಡ್ತಿರ್ತಾನೆ. ಇತ್ತಿಚೆಗೆ ಬ್ಲಾಕ್ ಮನಿ ವೈಟ್ ಮಾಡೋ ವಿಚಾರದಲ್ಲಿ ಹಣಕಾಸು ವಿಚಾರದಲ್ಲಿ ಸ್ವಲ್ಪ ಏರುಪೇರಾಗಿ 8 ಲಕ್ಷ ಹೆಚ್ಚು ಕಡಿಮೆಯಾಗಿ ಅಧಿಕಾರಿ‌ ಮತ್ತು ಕಾರ್ ಚಾಲಕನ ನಡುವೆ ಹೇರು ಪೇರಾದ ಹಣದ ವಿಚಾರದಲ್ಲಿ ಕಲಹವಾಗಿದ್ದು ಭೀಮನಾಯ್ಕ್ ಸೇರಿದಂತೆ ಆತನ ಖಾಸಗಿ ಕಾರ್ ಚಾಲಕ ಅಹಮದ್ ಎಂಬುವರು ಹಣವನ್ನು ಏರುಪೇರಾದ ಹಣ ವಾಪಸ್ಸು ಕೊಡುವಂತೆ ಧಮಕಿ ಹಾಕಿದ್ದಲ್ಲದಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ನಿನ್ನೆ ಮದ್ದೂರಿ ಕೊಪ್ಪ ಸರ್ಕಲ್ ಬಳಿ ಇರುವ ಸಮೃದ್ಧಿ ಲಾಡ್ಜ್ 'ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಯುವ ಮುನ್ನ ತನ್ನ ಮೇಲಧಿಕಾರಿ ಭಿಮನಾಯ್ಕ ನಡೆಸಿರುವ ಇಂಚಿಂಚು ಅವ್ಯವಹಾರ ಮತ್ತು ಭ್ರಷ್ಟಾಚಾರವನ್ನು ಮೃತ ರಮೇಶ್ ಗೌಡ ತಾನೂ ಬರೆದಿರುವ 17 ಪುಟದ ಡೆತ್ ನೋಟ್ ನಲ್ಲಿ ಇಂಚಿಂಚು ದಾಖಲಿಸಿದ್ದಾನೆ. ಈ ಡೆತ್ನೋಟನಲ್ಲಿ ಅಧಿಕಾರಿ‌ ಬೀಮ ನಾಯ್ಕ ನಡೆಸಿದ್ದಾನೆ ಎನ್ನಲಾದ ಭ್ರಷ್ಟಚಾರ ವಿವರಗಳು ದಾಖಲಿಸಿದ್ದು ಇದರಲ್ಲಿ ಭೀಮನಾಯ್ಕನ ಅಕ್ರಮ ಆಸ್ತಿ ಗಳಿಕೆ, ಬ್ಲಾಕ್ ಮನಿ ವೈಟ್ ಧಂಧೆ ಕೂಡ ದಾಖಲಾಗಿದೆ. ವಿಶೇಷವೆಂದರೆ ಗಣಿ ದಣಿ ರೆಡ್ಡಿ ಗೆ 100ಕೋಟಿ ಹಣವನ್ನು ಶೇ20% ಕಮೀಷನ್ ಪಡೆದು ವೈಟ್ ಮಾಡಿಕೊಟ್ಟಿರುವ ವಿಚಾರ ಕೂಡ ದಾಖಲಾಗಿದೆ. ಅಲ್ಲದೆ ಅಧಿಕಾರಿಯಾಗಿ ತನ್ನ ಮೇಲಿದ್ದ  ಖುಲಾಸೆಗಾಗಿ ನ್ಯಾಯಾಧೀಶರುಗಳು ಮತ್ತು ತನಿಖಾಧಿಕಾರಿಗೆ ಲಂಚ ಕೊಟ್ಟಿರುವ ಉಲ್ಲೇಖ ಕೂಡ ಇದೆ.

ಇದಲ್ಲದೆ ತನ್ನ ಮೇಲಧಿಕಾರಿಯ ಭೀಮ ನಾಯ್ಕ್ ಎಲ್ಲೆಲ್ಲಿ ಯಾರ ಯಾರ ಹೆಸರಲ್ಲಿ  ಅಕ್ರಮ ಆಸ್ತಿ ಸಂಪಾಧಿಸಿರುವ ವಿವರಗಳನ್ನು ಕೂಡ ದಾಖಲಿಸಿದ್ದು, ಆತ ನಡೆಸಿರುವ ಭ್ರಷ್ಟಾಚಾರದ ಹಗರಣವನ್ನು ಬಿಡದೆ ವಿವರಿಸಿದ್ದಾನೆ. ಮದ್ದೂರು  ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಡೆತ್ ನೋಟ್ ವಶ ಪಡಿಸಿಕೊಂಡಿದ್ದಾರೆ. ಮೃತ ರಮೇಶ್ ಬರೆದಿರುವ ಡೆತ್ ನೋಟ್  ಆಧಾರವಾಗಿಸಿಕೊಂಡು ಸ್ನೇಹಿತರು‌ ಮತ್ತು ಸಂಬಂಧಿಕರು ಪ್ರಕರಣವನ್ನು ಸಿಬಿಐ ತನಿಖೆ ಒಳಪಡಿಸುವಂತೆ ಆಗ್ರಹಿಸಿದ್ದು,ನ್ಯಾಯ ಹೊರ ಬರುವ ಕೆಲಸ ಮಾಡುವಂತೆ ಒತ್ತಾಯಿಸಿದ್ದಾರೆ.

ಒಟ್ಟಾರೆ ಆತ್ಮಹತ್ಯೆ ಮಾಡಿಕೊಂಡ ಕಾರು ಚಾಲಕ ತಾನೂ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ವಿಶೇಷ ಸ್ವಾಧೀನ ಅಧಿಕಾರಿ ಭೀಮನಾಯ್ಕನ ಭ್ರಷ್ಟಾಚಾರದ ಹಗರಣ ಇಂಚಿಂಚ್ಚು ಬಿಚ್ಚಿಟ್ಟಿದ್ದು ಪೊಲೀಸ್ರು ಪ್ರಕರಣದ ಸತ್ಯವನ್ನು ಹೇಗೆ ಹೊರ ತೆಗೆಯುತ್ತಾರೋ ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios