ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿಯ ಮದುವೆಯ ಕರೆಯೋಲೆ ಈಗಾಗಲೇ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಕನ್ನಡದಲ್ಲಿ ಮೂಡಿಬಂದ ರೆಡ್ಡಿ ಆಮಂತ್ರಣ ಪತ್ರಿಕೆಯ ಅದ್ದೂರಿತನ ಕಂಡು ಅನೇಕರಲ್ಲಿ ಅನೇಕ ರೀತಿಯ ಪ್ರಶ್ನೆಗಳು ಮೂಡಿದವು. ಅಲ್ಲದೆ ರೆಡ್ಡಿಯವರು ಈ ಮದುವೆ ಮೂಲಕ ತನ್ನಲ್ಲಿರುವ ಸಂಪತ್ತಿನ ಅಶ್ಲೀಲ ಪ್ರದರ್ಶನ ಮಾಡಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿತ್ತು. ಯಾಕೆಂದರೆ ನನ್ನ ಅದೃಷ್ಟದ ಬಾಗಿಲೇ ತೆರೆದವಳು ಬ್ರಹ್ಮಿಣಿ. ಇವಳು ಹುಟ್ಟಿದ ಮೇಲೆ ನನ್ನ ಜೀವನ ಶೈಲಿಯೇ ಬದಲಾಯಿತು ಅಂತ ಆಪ್ತರ ಬಳಿ ಗಾಲಿ ರೆಡ್ಡಿ ಹೇಳಿಕೊಂಡಿದ್ದಾರಂತೆ. ಹೀಗಾಗಿ ಏಕೈಕ ಮಗಳ ಮದುವೆಗೆ ಜನಾರ್ದನ ರೆಡ್ಡಿ ಸುಮಾರು 180 ಕೋಟಿಗೂ ಹೆಚ್ಚು ಖರ್ಚು ಮಾಡಲಿದ್ದಾರಂತೆ. ಬಳ್ಳಾರಿ ಮತ್ತು ಹೈದ್ರಾಬಾದ್ ಟಾಕ್ ಪ್ರಕಾರ ಮದುವೆಯ ಒಟ್ಟು ಖರ್ಚು ಇನ್ನೂ ಜಾಸ್ತಿ ಆದರೂ ಆಗಬಹುದು.
ಬೆಂಗಳೂರು(ಅ.11): ಮಾಜಿ ಸಚಿವ ಜನಾರ್ದನ ರೆಡ್ಡಿ ಪುತ್ರಿಯ ಕಲ್ಯಾಣದ ವೈಭೋಗ ಕರುನಾಡಿನ ಮಂದಿಯನ್ನು ಬೆಚ್ಚಿ ಬೀಳಿಸಿದೆ. ಯಾಕೆಂದರೆ ಅಷ್ಟು ಆಡಂಬರದಲ್ಲಿ ಮಗಳ ಮದುವೆ ಮಾಡಲು ಮುಂದಾಗಿದ್ದಾರೆ. ಬ್ರಹ್ಮಿಣಿ ಮದುವೆಯ ವೈಭೋಗ ಬೆಂಗಳೂರಿನಲ್ಲಿ ಮೇಳೈಸಿದೆ. ಆಹ್ವಾನ ಪತ್ರಿಕೆಯೊಂದಕ್ಕೆ 6 ಸಾವಿರ ಖರ್ಚು ಮಾಡಿರುವ ಗಣಿಧಣಿಯ ಗ್ರ್ಯಾಂಡ್ ಮ್ಯಾರೇಜ್ ಊಹಿಸಲೂ ಸಾಧ್ಯವಿಲ್ಲ.
ಮಾಜಿ ಸಚಿವ ಜನಾರ್ದನರೆಡ್ಡಿ ಪುತ್ರಿಯ ಮದುವೆಯ ಕರೆಯೋಲೆ ಈಗಾಗಲೇ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಕನ್ನಡದಲ್ಲಿ ಮೂಡಿಬಂದ ರೆಡ್ಡಿ ಆಮಂತ್ರಣ ಪತ್ರಿಕೆಯ ಅದ್ದೂರಿತನ ಕಂಡು ಅನೇಕರಲ್ಲಿ ಅನೇಕ ರೀತಿಯ ಪ್ರಶ್ನೆಗಳು ಮೂಡಿದವು. ಅಲ್ಲದೆ ರೆಡ್ಡಿಯವರು ಈ ಮದುವೆ ಮೂಲಕ ತನ್ನಲ್ಲಿರುವ ಸಂಪತ್ತಿನ ಅಶ್ಲೀಲ ಪ್ರದರ್ಶನ ಮಾಡಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿತ್ತು. ಯಾಕೆಂದರೆ ನನ್ನ ಅದೃಷ್ಟದ ಬಾಗಿಲೇ ತೆರೆದವಳು ಬ್ರಹ್ಮಿಣಿ. ಇವಳು ಹುಟ್ಟಿದ ಮೇಲೆ ನನ್ನ ಜೀವನ ಶೈಲಿಯೇ ಬದಲಾಯಿತು ಅಂತ ಆಪ್ತರ ಬಳಿ ಗಾಲಿ ರೆಡ್ಡಿ ಹೇಳಿಕೊಂಡಿದ್ದಾರಂತೆ. ಹೀಗಾಗಿ ಏಕೈಕ ಮಗಳ ಮದುವೆಗೆ ಜನಾರ್ದನ ರೆಡ್ಡಿ ಸುಮಾರು 180 ಕೋಟಿಗೂ ಹೆಚ್ಚು ಖರ್ಚು ಮಾಡಲಿದ್ದಾರಂತೆ. ಬಳ್ಳಾರಿ ಮತ್ತು ಹೈದ್ರಾಬಾದ್ ಟಾಕ್ ಪ್ರಕಾರ ಮದುವೆಯ ಒಟ್ಟು ಖರ್ಚು ಇನ್ನೂ ಜಾಸ್ತಿ ಆದರೂ ಆಗಬಹುದು.
ಬಳ್ಳಾರಿ ಜಿಲ್ಲೆಯ ಭೂತಾಯಿಯ ಒಡಲನ್ನೇ ಸೀಳಿ ಲಕ್ಷಾಂತರ ಕೋಟಿ ಸಂಪಾದಿಸಿದ್ದರು ಗಾಲಿ ಜನಾರ್ಧನ ರೆಡ್ಡಿ. ಶಾಸಕರಾಗಿ-ಸಚಿವರಾಗಿ ದಶಕ ಕಳೆದ ಜನಾರ್ದನ ರೆಡ್ಡಿ ಬಳ್ಳಾರಿ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಯಾವ ಕಾಣಿಕೆಯನ್ನೂ ನೀಡಿಲ್ಲ. ಮತ ಕೊಟ್ಟವರ ಸಾಮಾಜಿಕ ಜೀವನ, ಆರ್ಥಿಕ ಜೀವನ ಸುಧಾರಿಸಲು ಕ್ರಮ ತೆಗೆದುಕೊಂಡಿಲ್ಲ.
ದೇಶದ ಆಸ್ತಿ ಖನಿಜ ಸಂಪತ್ತನ್ನು ಮಾರಿಕೊಂಡು, ಥೇಟ್ ಪಾಳೆಗಾರನಂತೆ ಮೆರೆದ ಜನಾರ್ದನ ರೆಡ್ಡಿ ಆಳ್ವಿಕೆ ಪ್ರಜಾಪ್ರಭುತ್ವದಲ್ಲಿ ಜಾಸ್ತಿ ದಿನ ನಡೆಯಲಿಲ್ಲ. ಮನೆಯಲ್ಲಿ ಮಲಗಿದ್ದಾಗಲೇ ಸಿಬಿಐ ಪೊಲೀಸ್ರು ಬಾಗಿಲು ತಟ್ಟಿ ಜೈಲಿಗೆ ತಳ್ಳಿದ್ದರು.ಬಳಿಕ ನಡೆದದ್ದೆಲ್ಲಾ ಇತಿಹಾಸ. ಬೇಲ್ ಪಡೆದು ಹೊರಗಡೆಗೆ ಬರಲು ಯತ್ನಿಸಿ ಜಡ್ಜ್'ನ್ನೇ ಅವರನ್ನೇ ಬುಕ್ ಮಾಡಿಕೊಂಡು ಯಡವಟ್ಟು ಮಾಡಿಕೊಂಡಿದ್ದರು.
ಈಗ ಅದೇ ಹಳೇ ದರ್ಬಾರಿನಲ್ಲಿ ತನ್ನ ಪುತ್ರಿಯ ಕಲ್ಯಾಣಕ್ಕೂ ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್'ನಲ್ಲಿ ಸಕಲ ಸಿದ್ಧತೆಯೂ ಬಿರುಸಾಗಿ ಸಾಗಿದೆ. ಹಂಪಿಯ ಐತಿಹಾಸಿಕ ವಿಜಯ ವಿಠಲನ ನಕಲಿ ಮಂಟಪವೇ ನಾಚುವಂತೆ ಮರುಸೃಷ್ಟಿ ಮಾಡಿ ಅದರಲ್ಲಿ ಬ್ರಹ್ಮಿಣಿಗೆ ಧಾರೆ ಎರೆದುಕೊಡಲಿದ್ದಾರೆ, ಜನಾರ್ದನ ರೆಡ್ಡಿ.
ಅಸಲಿಯನ್ನ ನಾಚಿಸುವ ನಕಲಿ ವಿಠಲನ ಸೃಷ್ಟಿ ಹೇಗಿದೆ? ಯಾರೆಲ್ಲಾ ಶ್ರಮಿಸುತ್ತಿದ್ದಾರೆ? ಮಗಳಿಗಾಗಿ ಗಣಿ ಧಣಿ ಖರ್ಚು ಮಾಡುತ್ತಿರುವ ಹಣ ಯಾವ ಪಾಲಿಕೆಯ ಬಜೆಟ್'ಗೆ ಸಮ ಅಂತಲ್ಲಾ, ನವೆಂಬರ್ 16 ಅಂದರೆ ಮುಂದಿನ ಬುಧವಾರ ನಡೆಯಲಿರುವ ಗ್ರ್ಯಾಂಡ್ ಮ್ಯಾರೇಜ್ ಫಿಲ್ಮೀ ಸ್ಟೈಲ್ನಲ್ಲಿ ನಡೆಸಲು ಸಿದ್ಧತೆ ನಡೆಯುತ್ತಿವೆ.

ಮದುವೆಯ ವಿಶೇಷತೆ
- ಮದುವೆ ಬಜೆಟ್ ಸುಮಾರು 180 ಕೋಟಿ
- ಪ್ಯಾಲೇಸ್ ಗ್ರೌಂಡ್ನಲ್ಲಿ ನ.16ರಂದು ವಿವಾಹ
- ಸುಮಾರು 36 ಎಕರೆ ಪ್ರದೇಶ ಕಲ್ಯಾಣಕ್ಕೆ ಮೀಸಲು
- ಮಂಟಪಕ್ಕೆ 2 ಎಂಟ್ರಿ ಹಾಗೂ 3 ಎಕ್ಸಿಟ್ಗಳು
- 6 ದಿನ ವಧು-ವರರಿಂದ ವಿಶೇಷ ಪೂಜೆ-ಪುನಸ್ಕಾರ
- ಹಂಪಿಯ ವಿಜಯ ವಿಠಲ ದೇಗುಲದ ಪ್ರತಿಕೃತಿ ಸೃಷ್ಟಿ
- ಐತಿಹಾಸಿಕ ನೈಜ ದೇವಾಲಯವನ್ನೇ ಚಾಚಿಸುತ್ತೆ!
- ಒಂದು ಕೋಟಿ ರೂ. ವೆಚ್ಚದಲ್ಲಿ ಪ್ರತಿಕೃತಿ ನಿರ್ಮಾಣ
ಕೋಟಿ ವೆಚ್ಚದ ವಧು-ವರನ ಮನೆ!: ಕೋಟಿ ಕೋಟಿ ಖರ್ಚಲ್ಲಿ ಹಳ್ಳಿ ನಿರ್ಮಾಣ
ದೇವಾಲಯ ದಾಟಿ ಮುಂದೆ ಬಂದರೆ. ಒಂದು ಹಳ್ಳಿಯ ವಾತಾವರಣ ಅತಿಥಿಗಳನ್ನು ಸ್ವಾಗತಿಸಲಿದೆ. ಈ ಹಳ್ಳಿಯೊಳಗೆ ಎರಡು ಮನೆಗಳನ್ನು ನಿರ್ಮಿಸಲಾಗಿದ್ದು ಒಂದು ವರ ರಾಜೀವ್ ರೆಡ್ಡಿಗೆ ಹಾಗೂ ಕುಟುಂಬಕ್ಕೆ. ಮತ್ತೊಂದು ವಧು ಹಾಗೂ ಕುಟುಂಬದ ಸದಸ್ಯರ ವಿಶ್ರಾಂತಿಗಾಗಿ ನಿರ್ಮಿಸಲಾಗಿದೆ. ಒಂದೊಂದು ಮನೆಗೆ ಸುಮಾರು 60 ಲಕ್ಷ ಖರ್ಚು ಮಾಡಲಾಗಿದೆಯಂತೆ! ಇಡೀ ಮದುವೆ ಮನೆ ತಲುಪುವ ಹಾದಿಯುದ್ದಕ್ಕೂ ಪಕ್ಕಾ ಹಳ್ಳಿ ಸೊಗಡಿನ ಟಚ್ ನೀಡಲಾಗಿದೆ. ಹತ್ತಾರು ಎತ್ತಿನ ಬಂಡಿ, ಹತ್ತಾರು ಜಟಕಾ ಬಂಡಿಗಳು ನಿಂತಿವೆ. ಅಲ್ಲಲ್ಲಿ ಗುಡಿಸಲುಗಳು, ಸಣ್ಣಪುಟ್ಟ ಹಳ್ಳಿ ಮನೆಗಳು, ಪಂಚಾಯಿತಿ ಕಟ್ಟೆ, ಅರಳಿಕಟ್ಟೆಗಳೂ ನಿರ್ಮಾಣಗೊಂಡಿವೆ. ನಡೆಯುವ ಹಾದಿ ಎರಡೂಬದಿಯಲ್ಲಿ ಕೆತ್ತನೆವುಳ್ಳ ಕಂಬಗಳ ದರ್ಶನವಾಗುತ್ತೆ.. ಈ ಎಲ್ಲಾ ಕೃತಿಗಳ ಕತೃ ಕರ್ನಾಟಕ ಹೆಸರಾಂತ ಕಲಾವಿದ ಶಶಿಧರ್ ಅಡಪ ಹಾಗೂ ಅವರ ತಂಡ. ಒಂದು ಕಡೆ ಬಳ್ಳಾರಿ ಬರದಿಂದ ತತ್ತರಿಸುತ್ತಿದೆ. ಇನ್ನೊಂದೆಡೆ ಬಳ್ಳಾರಿ ಮಣ್ಣು ಮಾರಿ ಗಳಿಸಿದ ಹಣದಲ್ಲಿ ಜನಾರ್ಧನ ರೆಡ್ಡಿ ಹಣ ದೌಲತ್ ತೋರಿಸುತ್ತಿದ್ದಾರೆ.
ಬ್ರಹ್ಮಿಣಿ ಕಲ್ಯಾಣಕ್ಕಾಗಿ ರೆಡ್ಡಿ 180 ಕೋಟಿ ಖರ್ಚು: ಮಹಾನಗರ ಪಾಲಿಕೆಯ ಬಜೆಟ್ 184 ಕೋಟಿ
ಕಳಂಕಿತ ಗಣಿಧಣಿ ಜನಾರ್ದನ ರೆಡ್ಡಿ ಜನಪ್ರತಿನಿಧಿಯಾಗಿ ಸ್ವಾರ್ಥವನ್ನ ಬದಿಗೆ ಇಟ್ಟಿದ್ದರೆ.. ಇವತ್ತು ಬಳ್ಳಾರಿ ಜಿಲ್ಲೆ. ಅದರಲ್ಲೂ ಹಂಪಿಯಲ್ಲಿ ಮತ್ತೆ ಸುವರ್ಣ ಯುಗ ಮರುಕಳಿಸಬೇಕಿತ್ತು. ಮತ್ತೆ ಎರಡು ವಿಜಯವಿಠಲನ ಮಂಟಪ, ಮತ್ತೊಂದು ವಿರೂಪಾಕ್ಷನ ದೇಗುಲ ನಿರ್ಮಾಣ ಆಗ್ತಿತ್ತು. ಆದ್ರೆ, ಆಗಿದ್ದೇ ಬೇರೆ. ಬ್ರಹ್ಮಣಿಯ ವಿವಾಹಕ್ಕೆ 180 ಕೋಟಿ ವ್ಯಯ ಮಾಡುವ ರೆಡ್ಡಿ, ಒಂದನ್ನು ಮರೆಯುವ ಹಾಗಿಲ್ಲ. ಅದೇನೆಂದರೆ ಬಳ್ಳಾರಿ ಮಹಾನಗರ ಪಾಲಿಕೆಯ ವಾರ್ಷಿಕ ಬಜೆಟ್ 184 ಕೋಟಿ. ಹೆಚ್ಚು ಕಮ್ಮಿ ಇಷ್ಟೇ ಹಣವನ್ನು ತನ್ನ ಮಗಳ ಗ್ರ್ಯಾಂಡ್ ಮದುವೆಗೆ ಸುರಿಯುತ್ತಿದ್ದಾರೆನ್ನುವುದು.
ಬಳ್ಳಾರಿಯಲ್ಲಿ ಭರ್ಜರಿ ಸಮಾರಂಭ
- ಪಕ್ಕಾ ತೆಲುಗು ಚಿತ್ರದ ಶೈಲಿಯಲ್ಲಿ ಮದುವೆ ಸಮಾರಂಭ
- ಹಣಕ್ಕೆ ಬೆಲೆಯೇ ಇಲ್ಲವೋ ಅನ್ನೋ ರೀತಿಯಲ್ಲಿ ಕಾರ್ಯಕ್ರಮ
- ಬಳ್ಳಾರಿಯ ಮನೆಯಲ್ಲಿ ಪೂರ್ವಭಾವಿ ಕಾರ್ಯಕ್ರಮಗಳೇ ಸಾಕ್ಷಿ
- ಪೂಜಾ ಕಾರ್ಯಕ್ರಮಕ್ಕೆ ಎಂದೇ ಲಕ್ಷಾಂತರ ಹಣ ಖರ್ಚು
- ಈ ಹಣದಲ್ಲೇ ನೂರಾರು ಬಡವರ ಮದುವೆ ನಡೆಯುತ್ತಿದ್ದವು
- ವಿವಿಧ ಕಾರ್ಯಕ್ರಮಗಳಿಗೆ ಬಳ್ಳಾರಿಯಲ್ಲಿ 50 ಎಕರೆ ಮೀಸಲು
- ಬಳ್ಳಾರಿಯಲ್ಲಿ ತೆಲುಗು ಚಿತ್ರರಂಗದವರ ಹಾಡು-ಕುಣಿತ
ಬಳ್ಳಾರಿ ನಗರಕ್ಕೆ ನೀರಿನ ಪೂರೈಕೆಗೆ ಕೇವಲ 80 ಕೋಟಿ
ರೆಡ್ಡಿಯ ಸಂಪತ್ತಿನ ಅಶ್ಲೀಲತೆಗೆ ಇದೊಂದೇ ಕಾರಣ ಸಾಕು ಅನಿಸುತ್ತೆ. ಬಳ್ಳಾರಿ ಜಿಲ್ಲೆಯ 7 ತಾಲೂಕುಗಳು ಕೂಡ ಬರದಿಂದ ತತ್ತರಿಸಿವೆ. ಇಡೀ ಜಿಲ್ಲೆಯಲ್ಲಿರೋ ಗ್ರಾಮಗಳಿಗೆ ಕುಡಿಯೋ ನೀರಿಗೆ ತತ್ವಾರ ಉಂಟಾಗಿದೆ. ಕುಡಿಯುವ ನೀರು ಪೂರೈಕೆ ಕಾಮಗಾರಿಗೇ ಮೀಸಲಿಟ್ಟ ಬಜೆಟ್ ಕೇವಲ 80 ಕೋಟಿ. ಒಟ್ಟಿನನಲ್ಲಿ ಬರವೇ ಬರಲಿ, ಕುಡಿಯೋ ನೀರಿಗೆ ತತ್ವಾರ ಇಡಲಿ, ಯಾರು ಏನೇ ಕೂಗಾಡಿದರೂ ನನ್ನ ಮಗಳ ವಿವಾಹವೇ ಮುಖ್ಯ. ಲಕ್ಷ್ಮಿಯೇ ಕಾಲು ಮುದಿರು ಮನೆಯಲ್ಲಿ ಬಿದ್ದಿರಬೇಕಾದರೆರೆ ಭಯ ಏತಕ್ಕೆ ಎನ್ನುವ ರೀತಿ ಜನಾರ್ದನ ರೆಡ್ಡಿ ಭಂಡತನ ಮುಂದುವರಿಸಿದ್ದಾರೆ.
ರೆಡ್ಡಿ ಮಗಳು ಬ್ರಹ್ಮಿಣಿಯ ವೈಭೋಗದ ಕಲ್ಯಾಣದ ಸಿದ್ಧತೆ ಹೀಗಿದೆ. ರೆಡ್ಡಿಯ ದುಡ್ಡಿನ ದರ್ಪದ ಜೊತೆ ಸಂಪತ್ತಿನ ಅಶ್ಲೀಲತೆ ಹೇಗೆಲ್ಲಾ ಪ್ರದರ್ಶನ ಆಗಿದೆ ಎಂಬುವುದು ಇದೀಗ ಬಯಲಾಗಿದೆ. ಬೆಂಗಳೂರಿನ ಖರ್ಚೇ 180 ಕೋಟಿ ಎಂದಾಗ ಜನಸಾಮಾನ್ಯರಾದ ನಾವೂ ಕೊಂಚ ಯೋಚಿಸಬೇಕಾಗುತ್ತದೆ.
