ಬಹುಕೋಟಿ ವೆಚ್ಚದ ನೂತನ ಮನೆಯನ್ನು ಜನಾರ್ದನ ರೆಡ್ಡಿ ಉದ್ಘಾಟಿಸಬೇಕು ಎಂಬ ಮಹಾದಾಸೆ ಹೊಂದಿದ್ದರು. ಅದರಂತೆ ಇವತ್ತು ರೆಡ್ಡಿ ಆಗಮಿಸಿ ಗೃಹಪ್ರವೇಶ ಮಾಡಿದರು.

ನೆಚ್ಚಿನ ನಾಯಕ ನಟನನ್ನು ಅಭಿಮಾನಿಗಳು ಆರಾದಿಸೋದು ನೋಡಿದಿವಿ. ಹೊಸ ಮನೆ ಕಟ್ಟಿದರೆ ಅದನ್ನು ಉದ್ಘಾಟನೆ ಮಾಡಬೇಕೆಂದು ಕಾದವರನ್ನು ನಾವು ನೋಡಿದಿವಿ. ಆದರೆ ಗಣಿನಾಡಿನಲ್ಲೊಬ್ಬ ನಾಯಕ ತನ್ನ ಆಪ್ತಮಿತ್ರನಿಗಾಗಿ ಶಬರಿಯಂತೆ ಕಾದಿದ್ದಾನೆ. ಅವರೇ ಸಂದಸ ಶ್ರೀರಾಮುಲು. ಹೌದು ಶ್ರೀರಾಮುಲು ಬರೋಬ್ಬರಿ 40 ಕೋಟಿ ವೆಚ್ಚದ;ಲ್ಲಿ ಬೃಹತ್ ಮನೆ ನಿರ್ಮಿಸಿದ್ದಾರೆ. ಆದರೆ, ಅದರ ಉದ್ಘಾಟನೆಗಾಗಗಿ ಗೆಳೆಯ ಜನಾರ್ದನ ರೆಡ್ಡಿ ಬರುವಿಕೆಗಾಗಿ ಕಾಯುತ್ತಿದ್ದರು. ಬಹುಕೋಟಿ ವೆಚ್ಚದ ನೂತನ ಮನೆಯನ್ನು ಜನಾರ್ದನ ರೆಡ್ಡಿ ಉದ್ಘಾಟಿಸಬೇಕು ಎಂಬ ಮಹಾದಾಸೆ ಹೊಂದಿದ್ದರು. ಅದರಂತೆ ಇವತ್ತು ರೆಡ್ಡಿ ಆಗಮಿಸಿ ಗೃಹಪ್ರವೇಶ ಮಾಡಿದರು. ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ನೂತನ ಮಧುಮಗಳು ಬ್ರಹ್ಮಿಣಿ, ಮಗ ಕಿರಿಟಿ ಸೇರಿದಂತೆ ಇಡೀ ರೆಡ್ಡಿ ಕುಟುಂಬ ಆಗಮಿಸಿ ಹರಿಸಿದರು.