ಜಮ್ಮು ಕಾಶ್ಮೀರ ಚುನಾವಣೆಯ ದಿನಾಂಕ ಪ್ರಕಟ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಒಟ್ಟು ನಾಲ್ಕು ದಿನಗಳ ಕಾಲ .8,10,13,16ರಂದು ಇಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. 

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ವಿವಾದದ ನಡುವೆಯೇ ಪುರಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅ.8, 10 , 13 ಹಾಗೂ 16 ರಂದು ಚುನಾವಣೆಗಳು ನಡೆ ಯಲಿವೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಶಾಲೀನ್ ಕಾಬ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಶ್ಮೀರದ ನಿವಾಸಿಗಳಿಗೆ ಸಂವಿಧಾನ ‘35 ಎ’ ಪರಿಚ್ಛೇದ ಅಡಿಯಲ್ಲಿ ನೀಡಲಾದ ವಿಶೇಷ ಸೌಲಭ್ಯ ಗಳನ್ನು ಚುನಾವಣೆ ಕಸಿದುಕೊಳ್ಳಲಿದೆ ಎಂದು ಆರೋಪಿಸಿ ಪಿಡಿಪಿ, ನ್ಯಾಷನಲ್ ಕಾನ್ಫೆರೆನ್ಸ್ ಸೇರಿ ದಂತೆ ಹಲವು ಪಕ್ಷಗಳು ಸ್ಥಳೀಯ ಸಂಸ್ಥೆ ಚುನಾ ವಣೆಯನ್ನು ಬಹಿಷ್ಕರಿಸಿವೆ. ಆ.20ರಂದು ಫಲಿತಾಂಶ ಪ್ರಕಟವಾಗಲಿದೆ.