Asianet Suvarna News Asianet Suvarna News

ಪ್ರಧಾನಿ ಮೋದಿ - ಅಮಿತ್ ಶಾ ರಿಂದಲೇ ನಡೆಯಿತಾ ಅಪಪ್ರಚಾರ .?

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಪಪ್ರಚಾರ ಮಾಡಿದ್ದಾರೆ. ತಮ್ಮ ಭಾಷಣಗಳಲ್ಲಿ ಇದು ಧರ್ಮ ಒಡೆಯುವ ಪ್ರಯತ್ನವೆಂದು ಅಪಪ್ರಚಾರ ಮಾಡಿದ್ದು ನ್ಯಾಯವೇ ಎಂದು  ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ. ಜಾಮದಾರ ಪ್ರಶ್ನಿಸಿದ್ದಾರೆ. 

Jamadar Slams PM Modi And Amit Shah

ಬೆಂಗಳೂರು :  ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ನಾವು ಪ್ರಾಮಾಣಿಕ ಹೋರಾಟ ಮಾಡಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಇದು ಧರ್ಮ ಒಡೆಯುವ ಪ್ರಯತ್ನವೆಂದು ಅಪಪ್ರಚಾರ ಮಾಡಿದ್ದು ನ್ಯಾಯವೇ ಎಂದು  ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.  ಜಾಮದಾರ ಪ್ರಶ್ನಿಸಿದ್ದಾರೆ. 

ಇಲ್ಲಿನ ಮುರುಘಾಮಠದಲ್ಲಿ  ಭಾನುವಾರ ನಡೆದ ಲಿಂಗಾಯತ ಧರ್ಮ-ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಯೋಗಿ ಮಂದಿರದಲ್ಲಿ ಅಮಿತ್ ಶಾ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮೂಲಕ ವೀರಶೈವ ಹಾಗೂ ಲಿಂಗಾಯತರನ್ನು ಒಡೆಯಲಾಗುತ್ತಿದೆ ಎಂದು ಹೇಳಿದರು. ಈ ಕುರಿತು ಮಾತನಾಡಲು ಅವರಿಗೆ ಏನು ಅಧಿಕಾರವಿದೆ? ಅವರೇನು ಪ್ರಧಾನ ಮಂತ್ರಿಯೇ ಅಥವಾ ಸಮಾಜದ ಮುಖಂಡರಾ ಎಂದರು. 

ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವೀರಶೈ ವರು ಮಾಡಿದ ಅಪಪ್ರಚಾರಕ್ಕೆ ತಲೆಗೊಡದೆ ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಪಟ್ಟಣಗಳ ಮಟ್ಟದಲ್ಲಿ ಸಂಘಟನೆ ಮಾಡುವ ಮೂಲಕ ಈ ಧರ್ಮದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ಜತೆಗೆ ಬಸವ ತತ್ವ ಒಪ್ಪುವ ವೀರಶೈವರು ಸಹ ಲಿಂಗಾಯತರಾಗಿದ್ದು, ತತ್ವ ಒಪ್ಪದವರು ಹಿಂದೂ ಧರ್ಮದವರು ಎಂಬುದನ್ನು ಸಹ ಕೇಂದ್ರ ಸರ್ಕಾರಕ್ಕೆ ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ತಿಳಿಸಿದರು.

ಉಳವಿ- ವೀರಶೈವರ ಪ್ರಭಾವ ಏಕೆ?: ವಿರಕ್ತಮಠ ಹಾಗೂ ಲಿಂಗಾ ಯತ ಧಾರ್ಮಿಕ ಕ್ಷೇತ್ರಗಳಲ್ಲಿ ವೀರಶೈವರು ತಮ್ಮ ಆಚರಣೆಗಳ ಪ್ರಭಾವ ಬೀರುತ್ತಿದ್ದು, ಇದನ್ನು ನಿಲ್ಲಿಸದಿದ್ದರೆ ಲಿಂಗಾಯತರು ಸುಮ್ಮನಿರುವುದಿಲ್ಲ ಎಂದು ಜಾಮದಾರ ಎಚ್ಚರಿಸಿದ್ದಾರೆ. ಉಳವಿಯಲ್ಲಿ ಚೆನ್ನಬಸವಣ್ಣನವರ ಸಮಾಧಿ ಇದೆ. ಅಲ್ಲಿ ಎರಡೂ ಬದಿ ನಂದಿ ವಿಗ್ರಹ ಸ್ಥಾಪಿಸಿರುವ ಪ್ರಶ್ನೆ ತಮ್ಮನ್ನು ಕಾಡುತ್ತಿದೆ. ಇದೇ ರೀತಿ ಗೊಡಚಿಯಲ್ಲೂ ವೀರಶೈವರು ತಮ್ಮ ಆಚರಣೆಗಳ ಪ್ರಭಾವ ಬೀರುತ್ತಿದ್ದಾರೆ. 

ಅಲ್ಲದೇ, ಬಸವ ಜಯಂತಿಯಂದು ಬಸವಣ್ಣನ ಪೂಜೆಯ ಬದಲು ಎತ್ತುಗಳ ಪೂಜೆ ಮಾಡುವುದು ಸಹ ಎಷ್ಟರ ಮಟ್ಟಿಗೆ ಸರಿ ಎಂದರು. ಲಿಂಗಾಯತ ಆಚರಣೆ: ಪಂಚಪೀಠಗಳು ಪೌರೋಹಿತ್ಯ ಮಾಡುತ್ತಿದ್ದರೆ ವಿರಕ್ತಮಠಗಳು ಧರ್ಮ ಪ್ರಚಾರ ಮಾಡುತ್ತಿವೆ. ಆದ್ದರಿಂದ ಪೂಜಾರಿಗಳು ಎಂದೂ ಗುರುಗಳಾಗುವುದಿಲ್ಲ. 

ಈ ಹಿನ್ನೆಲೆಯಲ್ಲಿ ವೀರಶೈವರ ಆಚರಣೆಗಳನ್ನು ಲಿಂಗಾಯತರು ಮಾಡದೇ ಪ್ರತ್ಯೇಕ ಲಿಂಗಾಯತ ಆಚರಣೆ ಮಾಡುವ ಕುರಿತು ಕೂಡಲ ಸಂಗಮದಲ್ಲಿ ಕೇಂದ್ರವೊಂದನ್ನು ಸ್ಥಾಪಿಸಲಾಗು ತ್ತಿದೆ. ಅಲ್ಲಿ ವೇದ-ಪುರಾಣ ಹಾಗೂ ಗ್ರಂಥಗಳ ಅಧ್ಯಯನ ನಡೆಯದೇ ಬಸವ ತತ್ವ, ಶರಣ ಸಂಸ್ಕೃತಿ, ಲಿಂಗಾಯತ ಕ್ರಾಂತಿ ಕುರಿತು ತಿಳಿವಳಿಕೆ ಕೊಡುವ ಚಿಂತನೆ ನಡೆದಿದೆ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮವನ್ನು ರಾಜ್ಯ ಸರ್ಕಾರ ಒಪ್ಪಿ ಈ ಕುರಿತು ಆದೇಶ ಮಾಡಿದ್ದಲ್ಲದೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಸಹ ಕಳುಹಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಶಿಫಾರಸು ಒಪ್ಪದಿದ್ದರೆ ತಾವು ನ್ಯಾಯಾಲಯದ ಮೊರೆ ಹೋಗುವುದು ನಿಶ್ಚಿತ ಎಂದರು.

ಹಣ್ಣು ಮದುಕರಿವರು: ಶಾಮನೂರ ಶಿವಶಂಕರಪ್ಪ ಸಾದರ, ತಿಪ್ಪಣ್ಣ ರೆಡ್ಡಿ, ಖಂಡ್ರೆ ಅವರು ಬಣಜಿಗ. ಇವರ್ಯಾರೂ ವೀರಶೈವರಲ್ಲ. ಅಲ್ಲದೇ, ಇವರೆಲ್ಲರೂ ಹಣ್ಣು ಮುದುಕ ರಾಗಿದ್ದಾರೆ. ಇವರೊಂದಿಗೆ ಇನ್ನೊಬ್ಬ ಮುದುಕ ಮನುಷ್ಯ ಚಿದಾನಂದಮೂರ್ತಿ ಎಂದು ಜಾಮದಾರ ವೀರಶೈವ ಮುಖಂಡರನ್ನು ಕಟುವಾಗಿ ಟೀಕಿಸಿದರು.

Follow Us:
Download App:
  • android
  • ios