ನವದೆಹಲಿ (ಡಿ.20): ರೈಲು ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ಶಾಕ್ ಕಾದಿದೆ. ಇಂತಹ ಒಂದು ಮುನ್ಸೂಚನೆಯನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ.

ಭಾರತೀಯ ಉದ್ಯಮ ಒಕ್ಕೂಟ (ಸಿಐಐ) ಆಯೋಜಿಸಿದ್ದ ‘ಭಾರತೀಯ ರೈಲ್ವೇಯಲ್ಲಿ ಲೆಕ್ಕಪತ್ರ ಸುಧಾರಣೆ’ಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಜೇಟ್ಲಿ, ಗ್ರಾಹಕರು ಸೇವೆಗಳಿಗೆ ತಕ್ಕವಾಗಿ ಪಾವತಿಸುವ ವ್ಯವಸ್ಥೆಗಳು ಜಗತ್ತಿನಾದ್ಯಂತ ಯಶಸ್ವಿಯಾಗಿ ನಡೆಯುತ್ತವೆ ಎಂದು ಹೇಳಿದ್ದಾರೆ.

ಜನಪ್ರಿಯ ಯೋಜನೆಗಳಲ್ಲಿ ಗ್ರಾಹಕರು, ಸೇವೆಗೆ ತಕ್ಕ ಹಣ ನೀಡಬೇಕಿಂದಿಲ್ಲ. ನಾವು ರೈಲ್ವೇ ಇಲಾಖೆಯನ್ನು ಸ್ವಾವಲಂಬಿ ಮಾಡುವ ಮೂಲಕ ವಿಶ್ವದರ್ಜೆ ಸೇವೆಯನ್ನು ಒದಗಿಸುವ ಉದ್ದೇಶವನ್ನಿಟ್ಟುಕೊಂಡಿದ್ದೇವೆ ಎಂದು ಜೇಟ್ಲಿ ಹೇಳಿದ್ದಾರೆ.

ಪ್ರತ್ಯೇಕ ರೈಲು ಬಜೆಟ್ ಮಂಡಿಸುವ 92 ವರ್ಷಗಳ ಸಂಪ್ರದಾಯಕ್ಕೆ ಕೊನೆಹಾಡುವ ನಿರ್ಧಾರವನ್ನು ಸರ್ಕಾರ  ಹಿಂದೆ ಘೋಷಿಸಿದೆ.