ಸಮುದ್ರದಾಳದಿಂದ ನೌಕಾ ಪಡೆಯ ಹಡಗಿನ ಮೇಲೆ ಉಗ್ರ ದಾಳಿ..?

https://static.asianetnews.com/images/authors/b348a094-0bef-5801-a1f6-61e57071185f.jpg
First Published 19, Jul 2018, 8:46 AM IST
Jaish Terrorists Training In Deep Sea Diving To Hit Navy War ships
Highlights

ಭಾರತದ ಮೇಲೆ ಒಂದಿಲ್ಲೊಂದು ಹೊಸ ಮಾದರಿಯಲ್ಲಿ ದಾಳಿ ಮಾಡಲು ಹೊಂಚು ಹಾಕುವ ಪಾಕಿಸ್ತಾನಿ ಉಗ್ರರು ಈಗ ದಾಳಿಗೆ ಹೊಸದೊಂದು ಮಾರ್ಗವನ್ನು ಕಂಡುಕೊಂದಿದ್ದಾರೆ. 

ನವದೆಹಲಿ: ಭಾರತದ ಮೇಲೆ ಒಂದಿಲ್ಲೊಂದು ಹೊಸ ಮಾದರಿಯಲ್ಲಿ ದಾಳಿ ಮಾಡಲು ಹೊಂಚು ಹಾಕುವ ಪಾಕಿಸ್ತಾನಿ ಉಗ್ರರು ಈಗ ದಾಳಿಗೆ ಹೊಸದೊಂದು ಮಾರ್ಗವನ್ನು ಕಂಡುಕೊಂದಿದ್ದಾರೆ. ಪಾಕಿಸ್ತಾನ ಬೆಂಬ ಲಿತ ಜೈಷ್-ಎ- ಮೊಹಮ್ಮದ್ ಭಯೋತ್ಪಾದಕ ಸಂಘ ಟನೆ ಸಮುದ್ರ ಡೈವರ್‌ಗಳನ್ನು ಬಳಸಿ ಭಾರತೀಯ ನೌಕಾ ಪಡೆಯ ಯುದ್ಧ ನೌಕೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದ್ದು, ಹೈ ಅಲರ್ಟ್ ಘೋಷಿ ಸಲಾಗಿದೆ. 

ಆಳ ಸಮುದ್ರ ಕಾರ್ಯಾಚರಣೆ ನಡೆಸುವ ಕುರಿತು ಜೈಷ್ ಉಗ್ರರಿಗೆ ಪಾಕಿಸ್ತಾನದ ಬಹಾವಲ್ಪುರದಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ಯುದ್ಧನೌಕೆ ಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿರುವ ಶಂಕೆ ವ್ಯಕ್ತವಾ ಗಿದೆ. ವಿಶಾಖಪಟ್ಟಣಂ ಸಾಗರ ತೀರದಲ್ಲಿರುವ ಐಎನ್ ಎಸ್ ಅರಿಹಂತ್, ಐಎನ್‌ಎಸ್ ಅರಿಘಾಟ್ ಹಾಗೂ ಐಎನ್‌ಎಸ್ ಚಕ್ರ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಯುವ ಸಂಭವ ಇದೆ ಎನ್ನಲಾಗಿದೆ. 

ಈ ಹಿನ್ನೆಲೆಯಲ್ಲಿ ನೌಕಾ ನೆಲೆಗಳು ಹಾಗೂ ಬಂದರು ಗಳಿಗೆ ಬಹುಸ್ತರದ ಭದ್ರತೆ ಒದಗಿಸಲಾ ಗಿದ್ದು, ಸಮುದ್ರ ಡೈವರ್‌ಗಳನ್ನು ಗುರುತಿ ಸುವ ಚಾಕಚಕ್ಯತೆ ಹೊಂದಿರುವ ಸೋನಾರ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಎನ್‌ಡಿಟೀವಿ ವರದಿ ಮಾಡಿದೆ.

ಆದರೆ ಬಂದರಿನಂತಹ ಇಕ್ಕಟ್ಟಿನ ಸ್ಥಳದಲ್ಲಿ ಸಮುದ್ರದ ಕೆಳಗಿನಿಂದ ನಡೆಯುವ ದಾಳಿಯನ್ನು ತಾಳಿಕೊಳ್ಳುವುದು ಸಮರನೌಕೆಗಳಂತಹ ದೈತ್ಯಾಹಡಗಿಗೆ ಕಷ್ಟಸಾಧ್ಯ ಎಂದು ತಜ್ಞರು ಹೇಳುತ್ತಾರೆ. 2000ನೇ ಇಸವಿಯಲ್ಲಿ ಅಮೆರಿಕದ 17  ನೌಕಾಪಡೆ ಯೋಧರು ಅಲ್ ಖೈದಾ ದಾಳಿಯಲ್ಲಿ ಮೃತರಾಗಿದ್ದರು. ದೋಣಿಯಲ್ಲಿ ಬಾಂಬ್ ತಂದು ಯೆಮೆನ್ ಬಳಿಯ ಏಡನ್‌ನಲ್ಲಿ ಉಗ್ರರು ಈ ದಾಳಿ ನಡೆಸಿದ್ದರು.

loader