ಇಲ್ಲಿನ ಜೈಪುರ ಪಾಲಿಕೆಯಲ್ಲಿ ಪ್ರತಿ ದಿನ ಬೆಳಿಗ್ಗೆ ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ಸಂಜೆ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಜಸ್ಥಾನ (ನ.01): ಇಲ್ಲಿನ ಜೈಪುರ ಪಾಲಿಕೆಯಲ್ಲಿ ಪ್ರತಿ ದಿನ ಬೆಳಿಗ್ಗೆ ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ಸಂಜೆ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ನೌಕರರಲ್ಲಿ ರಾಷ್ಟ್ರಭಕ್ತಿ ಮತ್ತು ಸೇವಾ ಮನೋಭಾವ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರಗೀತೆಯನ್ನು ಬೆಳಿಗ್ಗೆ 9.50ಕ್ಕೆ ಮತ್ತು ರಾಷ್ಟ್ರೀಯ ಹಾಡನ್ನು ಸಂಜೆ 5.55 ಕ್ಕೆ ಹಾಡಬೇಕು ಎಂದು ಪಾಲಿಕೆ ಆದೇಶ ಹೊರಡಿಸಿದೆ. ಈ ಆದೇಶ ಪಾಲಿಸಿ ಬೆಳಿಗ್ಗೆ 350 ಮಂದಿ ರಾಷ್ಟ್ರಗೀತೆ ಹಾಡಿದರು. ಬೆಳಿಗ್ಗೆ ರಾಷ್ಟ್ರಗೀತೆಗೆ ಗೈರುಹಾಜರಾದವರ ಬಯೊಮೆಟ್ರಿಕ್ ಹಾಜರಾತಿ ಸ್ವೀಕರಿಸುವುದನ್ನು ನಿರಾಕರಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಪಾಲಿಕೆಯ ಆದೇಶದ ಬಗ್ಗೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅಷ್ಟೇ ಅಲ್ಲದೆ ಯಾರು ರಾಷ್ಟ್ರಗೀತೆ ಹಾಡಲು ಹಿಂದೇಟು ಹಾಕುತ್ತಾರೋ ಅವರು ಪಾಕ್ತಿಸ್ಥಾನಕ್ಕೆ ಹೋಗಿ ಅಂತ ಮೇಯರ್ ಸಿಬ್ಬಂದಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
