ನಿರಂತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಜೈನ ಮುನಿ ತರುಣ ಸಾಗರ್ ನಿಧನರಾಗಿದ್ದಾರೆ. 51 ವರ್ಷದ ತರುಣ ಸಾಗರ್ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕೊನೆ ಉಸಿರೆಳೆದರು.
ನವದೆಹಲಿ[ಸೆ.01] ನವದೆಹಲಿಯ ಕೃಷ್ಣ ನಗರದ ರಾಧಾಪುರಿ ಜೈನ ಆಶ್ರಮದಲ್ಲಿ ಜೈನ ಮುನಿ ತರುಣ ಸಾಗರ್ ಕೊನೆ ಉಸಿರೆಳೆದರು. ಮುನಿಯ ಅಂತಿಮ ವಿಧಿ ವಿಧಾನಗಳು ಉತ್ತರ ಪ್ರದೇಶದ ತರುಣಸಾಗರಂ ನಲ್ಲಿ ನಡೆಯಲಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜೈನ ಸಮುದಾಯದಲ್ಲಿ ಅಪಾರ ಅನುಯಾಯಿಗಳನ್ನು ಹೊಂದಿರುವ ಮುನಿ ತರುಣ ಸಾಗರ್ ಜಾಂಡೀಸ್ ನಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಖಾಸಗಿ ಆಸ್ಪತ್ರೆಯಲ್ಲಿ 20 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದರು.
1967 ರ ಜೂನ್ 26ರಂದು ಮಧ್ಯ ಪ್ರದೇಶದ ದಾಹೋಹ್ ಜಿಲ್ಲೆಯಲ್ಲಿ ಜನಿಸಿದ ಪವನ್ ಕುಮಾರ್ ಜೈನ್ 1981 ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ತಮ್ಮ ಭಾಷಣಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಸಾಗರ್ ಗಳಿಸಿದ್ದರು.
