ಪೊಲೀಸರು ಚುರುಕಿನ ತನಿಖೆ ನಡೆಸುತ್ತಿದ್ದು ಖಂಡಿತಾ ಆರೋಪಿ ಸಿಕ್ಕೆ ಸಿಗುತ್ತಾನೆ ಎಂಬ ಭರವಸೆ ನಮಗಿದೆ' : ಪರಿಮಳಾ ಜಗ್ಗೇಶ್
ಬೆಂಗಳೂರು(ಆ.22): ನಟ ಜಗ್ಗೇಶ್ ಪುತ್ರ ಗುರುರಾಜ್' ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಶಿವಶಂಕರ್'ಗೆ ಜಾಮೀನು ದೊರೆತಿದೆ
69 ನೇ ಸಿಸಿಎಚ್ ಕೋರ್ಟ್ ನಿಂದ ಆರೋಪಿಗೆ ನ್ಯಾಯಮೂರ್ತೀ ನಂದಕುಮಾರ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಸದ್ಯ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಚುರುಕಿನ ತನಿಖೆ ನಡೆಸುತ್ತಿದ್ದು ಖಂಡಿತಾ ಆರೋಪಿ ಸಿಕ್ಕೆ ಸಿಗುತ್ತಾನೆ ಎಂಬ ಭರವಸೆ ನಮಗಿದೆ' ಅಲ್ಲದೆ ಗುರುರಾಜ್ ಗುಣಮುಖನಾಗುತ್ತಿದ್ದಾನೆ' ಎಂದು ಸುವರ್ಣ ನ್ಯೂಸ್'ಗೆ ಗುರು'ರಾಜ್ ತಾಯಿ ಪರಿಮಳ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
