ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳ್ನಾಡಿಗೆ ನೀರು ಬಿಡಬೇಕೋ..? ಬೇಡವೋ..? ಎಂಬ ಕುರಿತಾಗಿ ವಿಧಾನಸಭೆಯಲ್ಲಿ ನಿರ್ಣಯ
ವಿಧಾನಸಭೆ(ಸೆ.23): ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳ್ನಾಡಿಗೆ ನೀರು ಬಿಡಬೇಕೋ..? ಬೇಡವೋ..? ಎಂಬ ಕುರಿತಾಗಿ ವಿಧಾನಸಭೆಯಲ್ಲಿ ಕೈಗೊಳ್ಳಲು ನಿರ್ಧರಿಸಿರುವ ನಿರ್ಧಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿರ್ಣಯ ಮಂಡಿಸಲಿದ್ದಾರೆ.
ಒಂದು ಸಾಲಿನ ನಿರ್ಣಯ ಇದಾಗಿದೆ. ಸಚಿವ ಟಿ.ಬಿ. ಜಯಚಂದ್ರ ನಿರ್ಣಯ ಮಂಡಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ, ಜಯಚಂದ್ರ ಹಿಂದೆ ಸರಿದಿದ್ದು, ಜಗದೀಶ್ ಶೆಟ್ಟರ್ ಮಂಡಿಸುತ್ತಿದ್ದಾರೆ. ಜೆಡಿಎಸ್ ಶಾಸಕ ವೈಎಸ್`ವಿ ದತ್ತಾ ಅನುಮೋದನೆ ಕೊಡಲಿದ್ದಾರೆ.
