ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ| ಕಣಿವೆಯಲ್ಲಿ ಭಯೋತ್ಪಾದಕ ಸತ್ತರೂ ನೋವಾಗುತ್ತೆ ಎಂದ ಸತ್ಯಪಾಲ್ ಮಲಿಕ್| ಶಾಂತಿ ಸ್ಥಾಪನೆಯಲ್ಲಿ ಭದ್ರತಾಪಡೆಗಳ ಪಾತ್ರ ಮಹತ್ವದ್ದು ಎಂದ ಮಲಿಕ್| ಹಿಂಸಾಚಾರ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರವಂತೆ ಕರೆ

ಶ್ರೀನಗರ(ಜ.24): ಕಣಿವೆಯಲ್ಲಿ ಸೈನಿಕ ಮಾತ್ರವಲ್ಲ, ಓರ್ವ ಭಯೋತ್ಪಾದಕ ಸತ್ತರೂ ನೋವಾಗುತ್ತದೆ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. 

ಹಿಂಸಾಚಾರ ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಇದೇ ವೇಳೆ ಸತ್ಯಪಾಲ್ ಮಲಿಕ್ ದಂಗೆಕೋರರಿಗೆ ಕರೆ ನೀಡಿದ್ದಾರೆ.

Scroll to load tweet…

ತಮ್ಮ ಆಡಳಿತ ಯಂತ್ರ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಪುನರ್ವಸತಿ ಪ್ಯಾಕೇಜ್ ನ್ನು ರೂಪಿಸುವಲ್ಲಿ ಕಾರ್ಯನಿರತವಾಗಿದೆ ಎಂದು ಮಲಿಕ್ ತಿಳಿಸಿದ್ದಾರೆ. 

ಪೊಲೀಸರು ತಮ್ಮ ಕರ್ತವ್ಯವನ್ನು ಸಾಧ್ಯವಾದಷ್ಟೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಓರ್ವ ಭಯೋತ್ಪಾದಕ ಮೃತಪಟ್ಟರೂ ನೋವುಂಟಾಗುತ್ತದೆ. ಭಯೋತ್ಪಾದಕರು ಹಿಂಸಾಚಾರ ಬಿಟ್ಟು ಮುನ್ನೆಲೆಗೆ ಬರಬೇಕು ಎಂದು ಮಲಿಕ್ ಹೇಳಿದ್ದಾರೆ.