ನಮ್ಮ ಕುಟುಂಬದಲ್ಲಿ ಟ್ರಂಪ್ ಕೊನೆಯ ಅಧ್ಯಕ್ಷ ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 15 ವರ್ಷಗಳಲ್ಲಿ ನಮ್ಮ ಪುತ್ರಿ ಇವಾಂಕಾ ಅಧ್ಯಕ್ಷೆಯಾದರೂ ಅಚ್ಚರಿ ಇಲ್ಲ ಎಂದಿದ್ದಾರೆ.

ನ್ಯೂಯಾರ್ಕ್(ಅ.08): ಅಮೆರಿಕ ಕಂಡ ಅತ್ಯಂತ ವಿವಾದಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೀವನದ ಮೇಲೆ ಬೆಳಕು ಚೆಲ್ಲುವಂಥ ಪುಸ್ತಕವೊಂದು ಮುಂದಿನ ವಾರ ಬಿಡುಗಡೆಯಾಗಲಿದೆ. ಟ್ರಂಪ್‌'ರ ಮೊದಲ ಪತ್ನಿ ಇವಾನಾ ಈ ಪುಸ್ತಕ ಬರೆದಿದ್ದಾರೆ.

ಕೆಲ ಅಂಶಗಳು ಹೀಗಿವೆ.

ಮದುವೆ: ನಮ್ಮ ಮದುವೆ ಆಗಿದ್ದು 1977ರಲ್ಲಿ. ಆದರೆ 1989ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ನನ್ನ ಎದುರಿಗೆ ಬಂದ ಮರ್ಲಾ ಎಂಬ ಸುಂದರಿ ‘ನಾನು ನಿನ್ನ ಗಂಡನನ್ನು ಪ್ರೀತಿಸುತ್ತಿದ್ದೇನೆ. ನೀನು? ಎಂದು ನನ್ನನ್ನು ಪ್ರಶ್ನಿಸಿದ್ದಳು. ನಾನು ಆಕೆಯನ್ನು ಬೈದು ಕಳುಹಿಸಿದ್ದೆ. ಆದರೆ ಮುಂದೆ ಕೆಲ ದಿನಗಳಲ್ಲಿ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆ ‘ಬೆಸ್ಟ್ ಸೆಕ್ಸ್ ಐ ಹ್ಯಾವ್ ಎವರ್ ಹ್ಯಾಡ್’ ಎಂಬ ಶೀರ್ಷಿಕೆ ನೀಡಿ, ಟ್ರಂಪ್ ಮತ್ತು ಮರ್ಲಾ ಮಾಪಲ್ಸ್ ಸಂಬಂಧದ ಬಗ್ಗೆ ಗೇಲಿ ಮಾಡಿತ್ತು. ಅದಾದ 2 ವರ್ಷದಲ್ಲಿ ನಮ್ಮ ವಿಚ್ಛೇದನ ಆಯ್ತು’ ಎಂದು ತಮ್ಮ ಜೀವನದ ಕುರಿತು ಇವಾನಾ ಹೇಳಿಕೊಂಡಿದ್ದಾರೆ.

ಪುತ್ರಿ ಅಧ್ಯಕ್ಷೆ: ನಮ್ಮ ಕುಟುಂಬದಲ್ಲಿ ಟ್ರಂಪ್ ಕೊನೆಯ ಅಧ್ಯಕ್ಷ ಎಂದು ಹೇಳಲು ಸಾಧ್ಯವಿಲ್ಲ. ಮುಂದಿನ 15 ವರ್ಷಗಳಲ್ಲಿ ನಮ್ಮ ಪುತ್ರಿ ಇವಾಂಕಾ ಅಧ್ಯಕ್ಷೆಯಾದರೂ ಅಚ್ಚರಿ ಇಲ್ಲ ಎಂದಿದ್ದಾರೆ.