18 ವರ್ಷಗಳಲ್ಲಿ ಇದೇ ಮೊದಲ ಬಾರಿ ತಡರಾತ್ರವರೆಗೆ ನಡೆದ ಲೋಕಸಭಾ ಕಲಾಪ| ಕಲಾಪ ನಡೆಸಲು ಅವಕಾಶ ಮಾಡಿಕೊಟ್ಟ ಸ್ಪೀಕರ್‌ಗೆ ಧನ್ಯವಾದ ಅಂದ್ರ ಸಚಿವ ಪ್ರಹ್ಲಾದ್ ಜೋಷಿ|

ನವದೆಹಲಿ[ಜು.12]: ನವದೆಹ; ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿ ಲೋಕಸಭೆಯಲ್ಲಿ ಮಧ್ಯರಾತ್ರಿವರೆಗೆ ಚರ್ಚೆ ನಡೆದಿದೆ. ರೈಲ್ವೇ ಅನುದಾನಕ್ಕೆ ಸಂಬಂಧಿಸಿದಂತೆ ತಡರಾತ್ರಿ ಸುಮಾರು 12 ಗಂಟೆಯವರೆಗೆ ಮುಂದುವರೆದ ಈ ಕಲಾಪದಲ್ಲಿ ವಿಪಕ್ಷ ನಾಯಕರೂ ಹಾಜರಿದ್ದರು ಎಂಬುವುದು ಉಲ್ಲೇಖನೀಯ.

ಲೋಕಸಭೆಯಲ್ಲಿ ಗುರುವಾರದಂದು 2019-20ನೇ ವರ್ಷದ ರೈಲ್ವೇ ಇಲಾಖೆಯ ನಿಯಂತ್ರಣದಲ್ಲಿರುವ ಅನುದಾನಗಳಿಗೆ ಸಂಬಂಧಿಸಿದಂತೆ ಸಂಸದರು ತಡ ರಾತ್ರಿಯವರೆಗೆ ಚರ್ಚೆ ನಡೆಸಿದರು. ಸಂಸತ್ತಿನ ಕೆಳಮನೆ[ಲೋಕಸಭೆ]ಯಲ್ಲಿ ಚರ್ಚೆ ನಡೆದಿದ್ದು, ಸುಮಾರು 100 ಸದಸ್ಯರು ಇದರಲ್ಲಿ ಪಾಲ್ಗೊಂಡು, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸಿದರು.

ಮಧ್ಯರಾತ್ರಿವರೆಗೆ ನಡೆದ ಲೋಕಸಭಾ ಕಲಾಪದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ 'ರೈಲ್ವೇ ಒಂದು ಕುಟುಂಬದಂತೆ. ಇದು ಎಲ್ಲರನ್ನೂ ಒಗ್ಗೂಡಿಸುತ್ತದೆ ಹಾಗೂ ಎಲ್ಲರಿಗೂ ಖುಷಿ ಕೊಡುತ್ತದೆ. ಎಲ್ಲಾ ಸದಸ್ಯರು ಉತ್ತಮ ಸಲಹೆಗಳನ್ನು ನೀಡುತ್ತಾರೆ. ಮೋದಿ ಪ್ರಧಾನಿಯಾದ ಬಳಿಕ ಈ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿದರು. ಮೋದಿ ರೈಲ್ವೇ ಅಭಿವೃದ್ಧಿಪಡಿಸುತ್ತಿದ್ದಾರೆ' ಎಂದಿದ್ದಾರೆ.

Scroll to load tweet…

ಸಂದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಡ ರಾತ್ರಿಯವರೆಗೆ ಸದನ ಕಲಾಪಕ್ಕೆ ಅವಕಾಶ ಮಾಡಿಕೊಟ್ಟ ಲೋಕಸಭಾ ಸ್ಪೀಕರ್ ಓಂ ಬಿರ್ಲಾರಿಗೆ ಧನ್ಯವಾದ ತಿಳಿಸಿದ್ದಾರೆ. 'ಸುಮಾರು 18 ವರ್ಷಗಳ ಬಳಿಕ ಇದೇ ಮೊದಲ ಬಾರಿ ಸದನದಲ್ಲಿ ತಡ ರಾತ್ರಿವರೆಗೆ ಕಲಾಪ ಮುಂದುವರೆದಿದೆ' ಎಂದಿದ್ದಾರೆ.