ನವದೆಹಲಿ(ಜು.18): ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ ಸಹೋದರ ಹಾಗೂ ಅವರ ಪತ್ನಿಗೆ ಸೇರಿದ 400 ಕೋಟಿ ರೂ. ಮೌಲ್ಯದ ಬೇನಾಮಿ ಪ್ಲಾಟ್ ಜಪ್ತಿ ಮಾಡಿದ್ದಾರೆ. 

ಅಕ್ರಮ ಆಸ್ತಿ ಗಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಯಾವತಿ ಸಹೋದರ ಆನಂದ್ ಕುಮಾರ್ ಹಾಗೂ ಅವರ ಪತ್ನಿಗೆ ಸೇರಿದ ಏಳು ಎಕರೆ ಪ್ಲಾಟ್ ಅನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗಷ್ಟೇ ಮಾಯಾವತಿ ಅವರು ಆನಂದ್ ಕುಮಾರ್ ಅವರನ್ನು ಬಿಎಸ್'ಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.