Asianet Suvarna News Asianet Suvarna News

ಶಾಸಕನ ಮನೆಯಲ್ಲಿ 560 ಎಕರೆಯ ಆಸ್ತಿ ಪತ್ರ, 10 ಕೆಜಿ ಚಿನ್ನ ಸೇರಿದಂತೆ 120 ಕೋಟಿ ಅಕ್ರಮ ಆಸ್ತಿ ಪತ್ತೆ

ಅಲ್ಲದೆ ಶಾಸಕರು ಅಕ್ರಮ ಆಸ್ತಿಗಳಿಗೆ ಹಲವು ವರ್ಷಗಳಿಂದ ಆದಾಯ ತೆರಿಗೆಯನ್ನು ಪಾವತಿಸಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ 75 ಕೋಟಿ ರೂ. ಹಣ ಸ್ವಿಕರಿಸದ್ದು, ಇದಕ್ಕೆ ಲೆಕ್ಕ ತೋರಿಸದೆ ವಂಚಿಸಿದ್ದಾರೆ ಎನ್ನಲಾಗಿದೆ.

IT Seize 120 Crore illegal Asset

ಬೆಂಗಳೂರು(ಫೆ.11): ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, 1.10 ಕೋಟಿ ನಗದು, 10 ಕೆಜಿ ಚಿನ್ನ, 560 ಎಕರೆ ಭೂ ದಾಖಲೆಯ ಪತ್ರಗಳು ಸೇರಿದಂತೆ 120 ಕೋಟಿಗೂ ಹೆಚ್ಚು ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಮನೆ, ವಾಣಿಜ್ಯ ಕಟ್ಟಡಗಳು ಸೇರಿದಂತೆ  3500 ಆಸ್ತಿ ಪಾಸ್ತಿ ಪತ್ತೆ ಹಚ್ಚಿದ್ದಾರೆ. ಅಲ್ಲದೆ ಶಾಸಕರು ಅಕ್ರಮ ಆಸ್ತಿಗಳಿಗೆ ಹಲವು ವರ್ಷಗಳಿಂದ ಆದಾಯ ತೆರಿಗೆಯನ್ನು ಪಾವತಿಸಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ 75 ಕೋಟಿ ರೂ. ಹಣ ಸ್ವಿಕರಿಸದ್ದು, ಇದಕ್ಕೆ ಲೆಕ್ಕ ತೋರಿಸದೆ ವಂಚಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios