ಮೋರಿಗೆ ಕಟ್ಟಿಕೊಂಡ ಕಾಂಡೋಮ್ ಹೇಳಿದ ಕತೆ

ಅಲ್ಲಿ ಡ್ಯಾನ್ಸ್ ಕ್ಲಾಸ್ ಹೆಸರಲ್ಲಿ ಜನ ಸೇರುತ್ತಿದ್ದರು. ನಗರದ ಹೃದಯ ಭಾಗದಲ್ಲಿ ಬಹುದಿನಗಳಿಂದಲೂ ವೇಶ್ಯಾಟಿಕೆ ನಡೆಯುತ್ತಿದ್ದರೂ ಯಾರೊಬ್ಬರ ಕಣ್ಣಿಗೂ ಬಿದ್ದಿರಲಿಲ್ಲ. ಅಷ್ಟಕ್ಕೂ ಈ ದಂಧೆ ಬಯಲಾಗಿದ್ದೆ ಬಹಳ  ಇಂಟರೆಸ್ಟಿಂಗ್.

It's not a Dance Class:Prostitution racket busted in Mysuru

ಮೈಸೂರು [ಜೂ.20] ಅಲ್ಲಿ ಡ್ಯಾನ್ಸ್ ಕ್ಲಾಸ್ ಹೆಸರಲ್ಲಿ ಜನ ಸೇರುತ್ತಿದ್ದರು. ನಗರದ ಹೃದಯ ಭಾಗದಲ್ಲಿ ಬಹುದಿನಗಳಿಂದಲೂ ವೇಶ್ಯಾಟಿಕೆ ನಡೆಯುತ್ತಿದ್ದರೂ ಯಾರೊಬ್ಬರ ಕಣ್ಣಿಗೂ ಬಿದ್ದಿರಲಿಲ್ಲ. ಅಷ್ಟಕ್ಕೂ ಈ ದಂಧೆ ಬಯಲಾಗಿದ್ದೆ ಬಹಳ  ಇಂಟರೆಸ್ಟಿಂಗ್.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲವೊಂದು ಬಯಲಾಗಿದೆ. ಸಾಂಸ್ಕೃತಿಕ ನಗರಿ ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯ ಎಸಿಪಿ ಕಚೇರಿ ಮುಂದೆ ಮೋರಿ ಕಟ್ಟಿಕೊಂಡ ಪರಿಣಾಮವಾಗಿ ನಗರ ಪಾಲಿಕೆ ಸಿಬ್ಬಂದಿಗಳು ಇಟಾಚಿ ಸಹಾಯದೊಂದಿಗೆ ಮೋರಿ ತೆಗೆಯಲು ಮುಂದಾಗಿದ್ದರು. ಆದರೆ ಮೋರಿ ಕ್ಲೀನ್ ಮಾಡಲು ಮುಂದಾದ ಸಿಬ್ಬಂದಿಗಳಿಗೆ ಕೆಲವೇ ಹೊತ್ತಿನಲ್ಲಿ ಶಾಕ್ ಒಂದು ಕಾದಿತ್ತು.

ಹೌದು.. ರಾಶಿ ರಾಶಿ ಕಾಂಡೋಮ್ ಗಳ ರಾಶಿ ಮೋರಿಯಲ್ಲಿ ಸಿಕ್ಕಿತ್ತು.  ತಕ್ಷಣವೇ ಪಾಲಿಕೆ ಸಿಬ್ಬಂದಿಗಳು ಏರಿಯಾ ಕಾರ್ಪೊರೇಟರ್ ಪ್ರಶಾಂತ್ ಗೌಡರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಆಗಮಿಸಿದ ಪ್ರಶಾಂತ್ ಗೌಡ ಅನುಮಾನಗೊಂಡು ಮೋರಿಯ ಪಕ್ಕದಲ್ಲೇ ಇದ್ದ ಕ್ರಿಯೇಟಿವ್ ದಿ ಡ್ಯಾನ್ಸ್ ಕಟ್ಟಡವನ್ನು ರೇಡ್ ಮಾಡಿದರು. ದೇವರಾಜ ಪೊಲೀಸರ ಸಹಾಯದೊಂದಿಗೆ ರೇಡ್ ನಡೆಸಿದಾಗ ಅಲ್ಲಿ ಅಕ್ರಮವಾಗಿ ಸ್ಪಾ ನಡೆಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.

ಇಡೀ ಕಟ್ಟಡವನ್ನು ಪೊಲೀಸರು ಶೋಧಿಸಿ ಹೊರತೆಗೆದಾಗ ಕಟ್ಟಡಗಳ ಮೂಲೆಮೂಲೆಯಲ್ಲೂ ಕಾಂಡೋಮ್ ಪ್ಯಾಕೆಟ್ ಗಳು, ಹಳೆಯ ಬಟ್ಟೆಗಳು ಹಾಗೂ ಇತರ ವಸ್ತುಗಳು ಪತ್ತೆಯಾದವು. ದೇವರಾಜ ಪೊಲೀಸರು ಸ್ಪಾ ಮೇಲ್ವಿಚಾರಕಿ ಜೊತೆಗೆ ಆಕೆಯನ್ನು ವಶಕ್ಕೆ ಪಡೆದರು. ಆದರೆ ವಿಷಯ ತಿಳಿಯುತ್ತಿದ್ದಂತೆ ಸ್ಪಾ ಮಾಲಿಕ ಸಂತೋಷ್ ಪರಾರಿಯಾಗಿದ್ದು ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ.

Latest Videos
Follow Us:
Download App:
  • android
  • ios