ತಮಿಳುನಾಡು (ಡಿ. 21): ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಮಮೋಹನ್ ರಾವ್​​ ಮನೆ ಮೇಲೆ ಐಟಿ ದಾಳಿ ನಡೆದಿದೆ.

ಚೆನ್ನೈನ ಅಣ್ಣಾ ನಗರದಲ್ಲಿರುವ ರಾವ್ ಮನೆ ಮೇಲೆ ಬೆಳಗಿನ ಜಾವ  5:30ರ ವೇಳೆ ಐಟಿ ದಾಳಿ ನಡೆಸಲಾಗಿದೆ. ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ರಾಮಮೋಹನ್ ಸಂಬಂಧಿಕರ 7 ಮನೆಗಳ ಮೇಲೂ ಐಟಿ ದಾಳಿ ನಡೆಸಲಾಗಿದೆ.

ಹಿನ್ನೆಲೆ

ಡಿ.9ರಂದು ಚೆನ್ನೈನ ಶೇಖರ್​ ರೆಡ್ಡಿ ಮನೆ ಮೇಲೆ ಐಟಿ ರೇಡ್ ನಡೆಸಿದ ವೇಳೆ ಅಪಾರ ಪ್ರಮಾಣದ ಹಣ, ಚಿನ್ನ ಪತ್ತೆಯಾಗಿತ್ತು.  ತಮಿಳುನಾಡು ಸರ್ಕಾರದ ಜೊತೆ ಉತ್ತಮ ಸಂಪರ್ಕ ಹೊಂದಿದ್ದ ಶೇಖರ್​ ರೆಡ್ಡಿ ಆಪ್ತರಾದ ಶ್ರೀನಿವಾಸರೆಡ್ಡಿ,

ಪಿಡಬ್ಲ್ಯುಡಿ ಗುತ್ತಿಗೆದಾರ ಸೇರಿ ಹಲವು ಅಧಿಕಾರಿಗಳ ಮನೆಗಳ ಮೇಲೆ ರೇಡ್ ನಡೆದಿತ್ತು. ಇವರ ಮೇಲೆ ಬ್ಲ್ಯಾಕ್​ ಅಂಡ್ ವೈಟ್​ ಮನಿ ದಂಧೆಯಲ್ಲಿ ಭಾಗಿದ್ದ ಆರೋಪ ಕೇಳಿ ಬಂದಿತ್ತು.

ಶೇಖರ್ ರೆಡ್ಡಿ, ಮುಖ್ಯ ಕಾರ್ಯದರ್ಶಿ ರಾಮಮೋಹನ್​ ಜಂಟಿಯಾಗಿ ಹಲವು ಕಡೆ ಆಸ್ತಿ ಖರೀದಿ ಮಾಡಿದ್ದಾರೆ ಎನ್ನಲಾಗಿತ್ತು.  ಈ ಹಿನ್ನೆಲೆ ರಾಮಮೋಹನ್​ ಮನೆ ಮೇಲೆ ರೈಡ್​​ ಮಾಡಲಾಗಿದೆ