ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಸಚಿವ ಡಿ.ಕೆ.ಶಿವಕುಮಾರ್ ಗೆ ಮತ್ತೊಂದು ಐಟಿಯಿಂದ ಕಂಟಕ ಎದುರಾಗಿದೆ. ಏನದು ಕಂಟಕ?
ಬೆಂಗಳೂರು, [ಜ.07]: ಇತ್ತೀಚೆಗೆ ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ನಡೆದಿದ್ದ ಐಟಿ ದಾಳಿ ಪ್ರಕರಣ ಮತ್ತಷ್ಟು ಚುರುಕುಗೊಂಡಿದ್ದು, ಡಿಕೆಶಿ ಸಂಕಷ್ಟು ಸಿಲುಕಿದ್ದಾರೆ.
ಡಿಕೆಶಿ ಮನೆ ಮೇಲೆ ಐಟಿ ದಾಳಿ ಪ್ರಕರಣದ ತನಿಖೆ ನಡೆಸಿದ ವೇಳೆ ತಾಯಿ ಹೆಸರಲ್ಲಿ ಕೋಟಿ-ಕೋಟಿ ಬೆನಾಮಿ ಆಸ್ತಿ ಪತ್ತೆಯಾಗಿದೆ.
ನಾನು ತಪ್ಪು ಮಾಡಿಲ್ಲ; ಕ್ರಿಮಿನಲ್ ಅಲ್ಲ: ಡಿಕೆಶಿ
ಬೆನಾಮಿ ಆಸ್ತಿ ಪತ್ತೆಯಾದ ಬೆನ್ನಲ್ಲೆ ಐಟಿ ಅಧಿಕಾರಿಗಳು ಮತ್ತಷ್ಟು ತನಿಖೆ ಚುರುಕುಗೊಳಿಸಿದ್ದು, ಮೂರು ದಿನದ ಹಿಂದೆ ಡಿಕೆಶಿ ಮತ್ತು ತಾಯಿ ಗೌರಮ್ಮ ಅವರನ್ನು ವಿಚಾರಣೆ ನಡೆಸಿದ್ದರು.
ಪತ್ತೆಯಾಗಿರುವ ಕೋಟಿ-ಕೋಟಿ ಬೇನಾಮಿ ಆಸ್ತಿ ಬಗ್ಗೆ ಐಟಿ ದಾಖಲಾತಿ ಕಲೆ ಹಾಕಿದ್ದು, ಆದಾಯ ತೆರಿಗೆ ಕಾಯಿದೆ 277, 278, 227, 228 ಹಾಗೂ ಐಪಿಸಿ ಸೆಕ್ಷನ್ 120(b) ಅಡಿ ದೂರು ದಾಖಲಿಸಿಕೊಂಡಿದ್ದಾರೆ.
ಡಿ.ಕೆ. ಶಿವಕುಮಾರ್‌ಗೆ ಬಿಗ್ ರಿಲೀಫ್, ಬಂಧನ ಭೀತಿಯಿಂದ ಬಚಾವ್
ಇನ್ನು ಎಲ್ಲಾ ಬೆನಾಮಿ ಆಸ್ತಿಯ ದಾಖಲಾತಿ ಕ್ರೋಡಿಕರಣ ಮಾಡಿ ದೆಹಲಿಯಲ್ಲಿ ಇರುವ ಐಟಿ ಕೋರ್ಟ್ ಗೆ ಸಲ್ಲಿಕೆ ಮಾಡಲು ಐಟಿ ಮುಂದಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಬ್ಬರು ಸುವರ್ಣ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹತ್ತಿರುವ ಬರುತ್ತಿದ್ದಂತೆಯೇ ತಾಯಿಯ ಹೆಸರಲ್ಲಿ ಸಂಪಾದನೆ ಮಾಡಿರುವ ಆಸ್ತಿ ಡಿಕೆಶಿಗೆ ಮುಳುವಾಗಿವ ಸಾಧ್ಯತೆ ಇದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 7, 2019, 8:53 PM IST