ದೆಹಲಿ ಸೇರಿದಂತೆ 22 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಾಲೂ ಪ್ರಸಾದ್ ವಿರುದ್ಧ ಭೂ ಕಬಳಿಕೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ  ದೆಹಲಿ, ಗುರುಗ್ರಾಮ್​​ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನವದೆಹಲಿ (ಮೇ.16): ಆರ್’​​ಜೆಡಿ ಮುಖ್ಯಸ್ಥ, ಮಾಜಿ ಬಿಹಾರ ಸಿಎಂ ಲಾಲೂ ಪ್ರಸಾದ್ ಯಾದವ್’​ಗೆ ಸೇರಿದ ಆಸ್ತಿಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದೆಹಲಿ ಸೇರಿದಂತೆ 22 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಾಲೂ ಪ್ರಸಾದ್ ವಿರುದ್ಧ ಭೂ ಕಬಳಿಕೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದೆಹಲಿ, ಗುರುಗ್ರಾಮ್​​ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಅಧಿಕಾರಿಗಳು ಲಾಲೂಗೆ ಸೇರಿದ ಆಸ್ತಿ ಪತ್ರ ಹಾಗೂ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯಿಂದ ಲಾಲೂ ಪ್ರಸಾದ್ ಯಾದವ್’​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.