ರಾಜ್ಯದಲ್ಲಿ ಮತ್ತೊಂದು ಐಟಿ ರೇಡ್ ಆಗಿದೆ. ಈ ಬಾರಿ ಸಚಿವ ಡಿಕೆ ಶಿವಕುಮಾರ್ ಆಪ್ತ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಬೆಂಗಳೂರು (ಅ.24): ರಾಜ್ಯದಲ್ಲಿ ಮತ್ತೊಂದು ಐಟಿ ರೇಡ್ ಆಗಿದೆ. ಈ ಬಾರಿ ಸಚಿವ ಡಿಕೆ ಶಿವಕುಮಾರ್ ಆಪ್ತ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ರ ಮೇಲೆ ಐಟಿ ಇಲಾಖೆಗೆ ಗುತ್ತಿಗೆದಾರನೊಬ್ಬ ದೂರನ್ನು ನೀಡಿದ್ದರು. ಹೀಗಾಗಿ ಇಂದು ಬಸವೇಶ್ವರ ನಗರ ನಿವಾಸ ಹಾಗೂ ಕಚೇರಿ, ಸದಾಶಿವನಗರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಅಧಿಕಾರಿಗಳ 3 ತಂಡ ಲಕ್ಷ್ಮಣ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕಳ್ಳತನದಿಂದ ಸಿಕ್ತಾ ಆದಾಯ ತೆರಿಗೆ ಅಧಿಕಾರಿಗಳಿಗೆ ಕ್ಲೂ..?
ಈ ಹಿಂದೆ ನಡೆದ ಕಳ್ಳತನದಿಂದ ಐಟಿ ಅಧಿಕಾರಿಗಳಿಗೆ ಕ್ಲೂ ಸಿಕ್ಕಿದೆ ಎನ್ನಲಾಗುತ್ತಿದೆ. ಕಳೆದ ವರ್ಷ ಲಕ್ಷ್ಮಣ್'ರ ಅಗ್ರಹಾರ ದಾಸರಹಳ್ಳಿ ನಿವಾಸದಲ್ಲಿ ಕಳ್ಳತನ ಅಗಿತ್ತು. ಈ ವೇಳೆ ಲಕ್ಷ್ಮಣ್ ಮಗ ವಿನಯ್ 5 ಲಕ್ಷವನ್ನು ಮನೆ ಕೆಲಸದಾತ ಕದ್ದು ಪರಾರಿಯಾಗಿದ್ದಾನೆ ಎಂದು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರನ್ನು ನೀಡಿದ್ದ. ನಂತರ ಸಿಸಿಬಿಗೆ ಪ್ರಕರಣ ವರ್ಗಾವಣೆ ಆಗಿತ್ತು. ಸಿಸಿಬಿ ಪೊಲೀಸರು ಪ್ರಕರಣ ಪತ್ತೆಹಚ್ಚಿ 5 ಕೋಟಿ ಹಣವನ್ನು ರಿಕವರಿ ಮಾಡಿದ್ದರು. ಈ ಮೂಲಕ ತಪ್ಪು ಕಂಪ್ಲೆಂಟ್ ಕೊಟ್ಟಿದ್ದು ಪ್ರೂವ್ ಆಗಿತ್ತು. ಇದನ್ನು ಐಟಿ ಇಲಾಖೆ ಸೂಕ್ಷ್ಮವಾಗಿ ಗಮನಿಸಿತ್ತು. ಇದೇ ಈ ದಾಳಿಗೆ ಕಾರಣ ಎಂದು ಹೇಳಲಾಗುತ್ತಿದೆ.
