ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದ ಪ್ರಕರಣ ಸಂಬಂಧ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ಪಡೆದ ಪ್ರಕರಣ ಸಂಬಂಧ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.
2011ರಲ್ಲಿ ಚೋಪ್ರಾ ನಿವಾಸದ ಮೇಲಿನ ದಾಳಿ ವೇಳೆ, ತೆರಿಗೆ ಕಟ್ಟದೇ ಇರುವ 27 ಲಕ್ಷ ರು. ಮೌಲ್ಯದ ಕಾರು ಮತ್ತು 40 ಲಕ್ಷ ರು. ಬೆಲೆಯ ಕೈಗಡಿಯಾರ ಪತ್ತೆಯಾಗಿತ್ತು.
ಆದರೆ, ಅವುಗಳು ತಾನು ಖರೀದಿಸಿಲ್ಲ. ಆಯಾ ಕಂಪನಿಗಳು ಕೊಡುಗೆಯಾಗಿ ನೀಡಿವೆ ಎಂಬುದು ಪ್ರಿಯಾಂಕಾ ವಾದಿಸಿದ್ದರು. ಆದರೆ ಈ ವಾದ ತಳ್ಳಿಹಾಕಿದ ತೆರಿಗೆ ಇಲಾಖೆ,ಕೊಡೆಗೆ ಪಡೆದ ವಸ್ತುಗಳಿಗೂ ತೆರಿಗೆ ಕಟ್ಟುವಂತೆ ಪ್ರಿಯಾಂಕಾಗೆ ನೋಟಿಸ್ ನೀಡಿದೆ.
