ಅಪನಗದೀಕರಣದ ಬಳಿಕ ಬ್ಯಾಂಕ್ ಗಳಲ್ಲಿ ಭಾರೀ ಪ್ರಮಾಣದ ಠೇವಣಿ ಇರಿಸಿದ 1 ಲಕ್ಷ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಲಿದೆ.

ನವದೆಹಲಿ: ಅಪನಗದೀಕರಣದ ಬಳಿಕ ಬ್ಯಾಂಕ್ ಗಳಲ್ಲಿ ಭಾರೀ ಪ್ರಮಾಣದ ಠೇವಣಿ ಇರಿಸಿದ 1 ಲಕ್ಷ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆರಿಗೆಗಳ್ಳರ ಬೇಟೆಯ ಮೊದಲ ಹಂತವಾಗಿ 50 ಸಾವಿರಕ್ಕೂ ಹೆಚ್ಚು ಠೇವಣಿ ಇರಿಸಿದ ಮತ್ತು ಆದಾಯ ತೆರಿಗೆ ವಿವರ ಪಾವತಿಸದ 70 ಸಾವಿರ ಸಂಸ್ಥೆಗಳಿಗೆ ಈ ವಾರ ನೋಟಿಸ್ ಜಾರಿ ಮಾಡಲಾಗುತ್ತದೆ.

ತೆರಿಗೆ ಪಾವತಿ ವಿವರದಲ್ಲಿ ತಪ್ಪು ಮಾಹಿತಿ ನೀಡಿದವರು ಮತ್ತು ಅಪನಗದೀಕರಣದ ಬಳಿಕ ಭಾರೀ ಪ್ರಮಾಣದ ಹಣ ಇಟ್ಟ 30000 ವ್ಯಕ್ತಿಗಳಿಗೆ ವಿವರಣೆ ಕೋರಿ ನೋಟಿಸ್ ನೀಡಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)