ಎಟಿಎಂ ಯಂತ್ರಗಳ ಮರು ಸಂಯೋಜನೆ ಕಾರ್ಯ ಆರಂಭಿಸುವಂತೆ ಕೆಲವು ಬ್ಯಾಂಕುಗಳು ಎಟಿಎಂ ಕಂಪನಿಗಳಿಗೆ ಈಗಾಗಲೇ ಸೂಚನೆ ನೀಡಿವೆ.

ನವದೆಹಲಿ(ಸೆ.04): ಆರ್‌ಬಿಐ ಒಂದು ವಾರದ ಹಿಂದೆ ಬಿಡುಗಡೆ ಮಾಡಿದ್ದ 200 ರು. ನೋಟುಗಳು ಎಟಿಎಂನಲ್ಲಿ ಲಭ್ಯವಾಗಲು ಇನ್ನೂ ಮೂರು ತಿಂಗಳು ಬೇಕಾಗಲಿದೆ. ಎಟಿಎಂಗಳನ್ನು ಮರುಸಂಯೋಜನೆ ಮಾಡಲು ಸಮಯ ತಗುಲುವ ಕಾರಣ, ಎಟಿಎಂಗಳಲ್ಲಿ 200 ರು. ನೋಟು ಸಿಗಲು ವಿಳಂಬವಾಗಲಿದೆ. ಎಟಿಎಂ ಯಂತ್ರಗಳ ಮರು ಸಂಯೋಜನೆ ಕಾರ್ಯ ಆರಂಭಿಸುವಂತೆ ಕೆಲವು ಬ್ಯಾಂಕುಗಳು ಎಟಿಎಂ ಕಂಪನಿಗಳಿಗೆ ಈಗಾಗಲೇ ಸೂಚನೆ ನೀಡಿವೆ. ಕಳೆದ ವರ್ಷ ನೋಟು ಅಪನಗದೀಕರಣ ಘೋಷಣೆಯ ಬಳಿಕ ದೇಶದ ಎಲ್ಲಾ ಎಟಿಎಂಗಳನ್ನು ಮರು ಸಂಯೋಜನೆಗೊಳಿಸಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred