ಐಟಿ ದಾಳಿ ಬಳಿಕ ಒಟ್ಟು 6 ಬಾರಿ ಕುಟುಂಬ ಸಮೇತ ವಿಚಾರಣೆಗೆ ಹಾಜರಾಗಿದ್ದ ಶಿವಕುಮಾರ್‌, ಮತ್ತೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಬೆಂಗಳೂರು(ನ.05): ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಮತ್ತೆ ಐಟಿ ಕಿರಿಕಿರಿ ಆರಂಭವಾಗಿದೆ. ಕುಟುಂಬ ಸಮೇತರಾಗಿ ವಿಚಾರಣೆಗೆ ಹಾಜರಾಗುವಂತೆ ಏಳನೇ ಬಾರಿಗೆ ಐಟಿ ನೋಟಿಸ್‌ ನೀಡಿದೆ. ಲೆಕ್ಕ ಪರಿಶೋಧಕರನ್ನು ಜತೆಯಲ್ಲಿ ಕರೆ ತರುವುದಕ್ಕೆ ಐಟಿ ನಿರಾಕರಿಸಿದೆ.

ಶನಿವಾರ ಬೆಳಗ್ಗೆ ಐಟಿ ಇಲಾಖೆ ಶಿವಕುಮಾರ್‌ ನಿವಾಸಕ್ಕೆ ಕಳುಹಿಸಿದ ನೋಟಿಸ್‌ನಲ್ಲಿ ಸೋಮವಾರ ಮಧ್ಯಾಹ್ನದ ಒಳಗಾಗಿ ಪತ್ನಿ ಉಷಾ, ತಾಯಿ ಗೌರಮ್ಮ ಹಾಗೂ ಇಬ್ಬರು ಪುತ್ರಿಯರ ಜತೆಗೆ ವಿಚಾರಣೆಗೆ ಹಾಜರಾಗಬೇಕು. ಆದರೆ ಈ ಸಂದರ್ಭದಲ್ಲಿ ನಿಮ್ಮ ಲೆಕ್ಕ ಪರಿಶೋಧಕರನ್ನು ಯಾವುದೇ ಕಾರಣಕ್ಕೂ ಕರೆ ತರುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ.

ಐಟಿ ದಾಳಿ ಬಳಿಕ ಒಟ್ಟು 6 ಬಾರಿ ಕುಟುಂಬ ಸಮೇತ ವಿಚಾರಣೆಗೆ ಹಾಜರಾಗಿದ್ದ ಶಿವಕುಮಾರ್‌, ಮತ್ತೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.