ಗೋಪಾಲನ್ ಎಂಟರ್ ಪ್ರೈಸಸ್, VRR ಬಿಲ್ಡರ್​​ ಕಚೇರಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ  ದಾಳಿಯಲ್ಲಿ ಬರೋಬ್ಬರಿ 169 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನೋಟ್ ಬ್ಯಾನ್ ಆದ ಬಳಿಕ ಐಟಿ ದಾಳಿಗಳಿಗೆ ಅದೇಷ್ಟೋ ಕಪ್ಪು ಕುಳಗಳು ಸಿಕ್ಕಿ ಬಿದ್ದಿದ್ದಾರೆ. ವಿಶೇಷ ಅಂದ್ರೆ ಅದರಲ್ಲಿ ರಾಜ್ಯದ ಅನೇಕರು ಇದ್ದಾರೆ ಎಂಬುದು ಒಂದೆಡೆ ಅಚ್ಚರಿಯಾದ್ರೆ , ಮತ್ತೊಂದೆಡೆ ಬೆಂಗಳೂರಿನ ರಿಯಲ್​ ಎಸ್ಟೇಟ್​​ ಉದ್ಯಮಿಗಳು ಹಾಗೂ ಮಾಲ್​​​ಗಳ ಮಾಲೀಕರ ಅವ್ಯವಹಾರ ಕೇಳಿದ್ರೆ ಇನ್ನಷ್ಟೂ ಶಾಕ್ ಆಗೋದ್ರಲ್ಲಿ ಅನುಮಾನವೇ ಬೇಡ . ಡಿಸೆಂಬರ್ 23ರಂದು ಐಟಿ ಅಧಿಕಾರಿಗಳು 20ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಆ ದಾಳಿಯಲ್ಲಿ ಎಷ್ಟು ಅವ್ಯವಹಾರ ಬಯಲಾಯ್ತು ಎಂಬ ನಿರೀಕ್ಷೆಗೆ ತೆರೆ ಬಿದ್ದಿದೆ. ಗೋಪಾಲನ್ ಎಂಟರ್ ಪ್ರೈಸಸ್, VRR ಬಿಲ್ಡರ್​​ ಕಚೇರಿಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ ಬರೋಬ್ಬರಿ 169 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದರ ಹೊರತಾಗಿ , ನವೆಂಬರ್ 8 ರ ಕೇಂದ್ರದ ಆದೇಶದ ನಂತರ ಭಾರೀ ಅವ್ಯವಹಾರ ನಡೆಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ತೆರಿಗೆ ವಂವನೆಯ ಹಣದಿಂದ ಹೆಚ್ಚು ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿರುವುದು ಹಾಗೂ ನಕಲಿ ದಾಖಲೆಗಳನ್ನು ಸೃಷ್ಠಿಸಿರುವುದು ಎಲ್ಲವೂ ಕಂಡು ಬಂದಿದ್ದು, ಅದಕ್ಕೆ ಪೋರಕವಾಗಿರುವ ದಾಖಲೆಗಳನ್ನು ವಸಪಡಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಆದಾಯ ಇಲಅಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ನಲ್ಲಿ ನೂರಾರು ಕೋಟಿ ಅವ್ಯವಹಾರ ನಡೆಸಿರುವ 2 ಕಂಪನಿಗಳಿಗೆ ಐಟಿ ಅಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದು , ತೆರಿಗೆ ವಂಚಸಿರುವುದರಿಂದ ದಂಡ ವಿಧಿಸಲಿದ್ದು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳುವ ಬಗ್ಗೆ ಇಡಿಗೆ ಮಾಹಿತಿ ನೀಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.