ನವದೆಹಲಿ (ಡಿ.23): ಕೇಂದ್ರ ಸರ್ಕಾರ ನೋಟು ಅಮಾನ್ಯ ಕ್ರಮ ಘೋಷಿಸಿದ ಬಳಿಕ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಗಳಲ್ಲಿ ರೂ.550 ಕೋಟಿ ಪತ್ತೆಯಾಗಿದೆ. ಅದರ ಪೈಕಿ, ರೂ.93 ಕೋಟಿಯು, ಸರ್ಕಾರ ಬಿಡುಗಡೆ ಮಾಡಿದ ಹೊಸ ನೋಟುಗಳಾಗಿವೆ.

ಈ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು 760 ಕಡೆ ದಾಲಿಗಳನ್ನು ನಡೆಸಿದೆ. ರೂ. 3590 ಕೋಟಿ ಅಘೋಷಿತ ಆದಾಯವನ್ನು ಇಲಾಖೆ ಪತ್ತೆಹಚ್ಚಿದೆ ಹಾಗೂ 3589 ನೋಟಿಸುಗಳನ್ನು ಜಾರಿಗೊಳಿಸಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆಯೆಂದು ಎಎನ್'ಐ ವರದಿ ಮಾಡಿದೆ.

ಪತ್ತೆಹಚ್ಚಲ್ಪಟ್ಟ ಪ್ರಕರಣಗಳಲ್ಲಿ ಸುಮಾರು 400 ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐಗೆ ವರ್ಗಾಯಿಸಲಾಗಿದೆ.