ಐಟಿ ದಾಳಿ ಮಾಡಿ, ಅಧಿಕಾರಿಗಳ ಮೂಲಕ ಡಿಕೆಶಿ ಅವರಿಗೆ ಆಮಿಷ ಒಡ್ಡಿ, ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.

ಬೆಂಗಳೂರು (ನ.10): ಐಟಿ ದಾಳಿ ಮಾಡಿ, ಅಧಿಕಾರಿಗಳ ಮೂಲಕ ಡಿಕೆಶಿ ಅವರಿಗೆ ಆಮಿಷ ಒಡ್ಡಿ, ಬಿಜೆಪಿಗೆ ಸೆಳೆಯಲಾಗುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.

ಕರ್ನಾಟಕ ಮತ್ತು ಗೋವಾ ತೆರಿಗೆ ಇಲಾಖೆ ಡಿಜಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದು, ಸಿಎಂ ಆರೋಪ ನಿರಾಕರಿಸಿದೆ. ಡಿ.ಕೆ.ಶಿವಕುಮಾರ್ ರನ್ನು ಬಿಜೆಪಿ ಸೇರಿ ಎಂಬ ಆಮಿಷದ ಆರೋಪದಲ್ಲಿ ಹುರುಳಿಲ್ಲ. ಬಿಜೆಪಿ ಸೇರಿ ಎಂದು ಐಟಿ ಅಧಿಕಾರಿಗಳು ಹೇಳುವ ಪ್ರಶ್ನೆಯೇ ಇಲ್ಲ. ಐಟಿ ಇಲಾಖೆ ವೃತ್ತಿಪರ ಮತ್ತು ರಾಜಕೀಯರಹಿತ ಇಲಾಖೆ ಎಂದು ಸಿಎಂಗೆ ಉತ್ತರಿಸಿದೆ. ಇನ್ನು ಡಿಕೆಶಿ ಮನೆ ದಾಳಿ ವೇಳೆ ಅಘೋಷಿತ ಆಸ್ತಿಪಾಸ್ತಿ ಪತ್ತೆಯಾಗಿದೆ. ಕೆಲ ಅಘೋಷಿತ ಆಸ್ತಿಪಾಸ್ತಿ ಬಗ್ಗೆ ಡಿಕೆಶಿಯಿಂದಲೇ ಒಪ್ಪಿ ಇದ್ದು, ಅಘೋಷಿತ ಆದಾಯದಿಂದ ನೂರಾರು ಕೋಟಿ ರೂಪಾಯಿ ಸಂಪಾದಿಸಲಾಗಿದೆ. ಲೆಕ್ಕಪತ್ರವಿಲ್ಲದ ಹಣ ಜಪ್ತಿ ಹಾಗೂ ಚಿನ್ನಾಭರಣ ಸಹ ಆಗಲೇ ವಶಕ್ಕೆ ಪಡೆಯಲಾಗಿದೆ ಎಂದು ಸಿಎಂ ಆರೋಪಕ್ಕೆ ಐಟಿ ಇಲಾಖೆ ಸ್ಪಷ್ಟನೆ ನೀಡಿದೆ.