ಕಾರ್ಟೋಸ್ಯಾಟ್-2 ಭೂ ವೀಕ್ಷಣ ಉಪಗ್ರಹ ಸೇರಿದಂತೆ 31 ಉಪಗ್ರಹಗಳನ್ನು ಇಸ್ರೋ ಒಂದೇ ಬಾರಿಗೆ ಪೊಲಾರ್ ರಾಕೆಟ್ ಮೂಲಕ ಜ.10ರಂದು ಉಡಾವಣೆ  ಮಾಡಲಾಗುವುದು ಎಂದು ಇಸ್ರೋ ಶುಕ್ರವಾರ ತಿಳಿಸಿದೆ.

ಬೆಂಗಳೂರು: ಕಾರ್ಟೋಸ್ಯಾಟ್-2 ಭೂ ವೀಕ್ಷಣ ಉಪಗ್ರಹ ಸೇರಿದಂತೆ 31 ಉಪಗ್ರಹಗಳನ್ನು ಇಸ್ರೋ ಒಂದೇ ಬಾರಿಗೆ ಪೊಲಾರ್ ರಾಕೆಟ್ ಮೂಲಕ ಜ.10ರಂದು ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಶುಕ್ರವಾರ ತಿಳಿಸಿದೆ. ಆಗಸ್ಟ್‌ನಲ್ಲಿ ಉಡಾವಣೆ ಮಾಡಿದ ದಿಕ್ಸೂಚಿ ಉಪಗ್ರಹ ಐಆರ್‌ಎನ್‌ಎಸ್ ಎಸ್-ಎಚ್ ವಿಫಲವಾದ ಬಳಿಕ ಪೊಲಾರ್ ಲಾಂಚ್ ವೆಹಿಕಲ್‌ನ ಮೊದಲ ಉಡಾವಣೆ ಇದಾಗಲಿದೆ.

ಜ.10ರಂದು ಉಡಾವಣೆ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಕಾರ್ಟೋಸ್ಯಾಟ್-2 ಉಪಗ್ರಹ ರಾಕೆಟ್‌ನ ಪ್ರಮುಖ ಪೇಲೋಡ್ ಆಗಿರಲಿದೆ ಎಂದು ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.