ಪಾಕ್ ವಿರುದ್ದ ಆರೋಪಗಳ ಸರಮಾಲೆ ಹೊರಿಸಿದ ಪಾಕ್ ಹೋರಾಟಗಾರ! ಐಎಸ್‌ಐ ಭಾರತದೊಂದಿಗೆ ಶಾಂತಿ ಮಾತುಕತೆಗೆ ಬಿಡಲ್ಲ! ಇಮ್ರಾನ್ ಮೇಲೆ ವಾಯ್ಸ್ ಆಫ್ ಕರಾಚಿ ಮುಖ್ಯಸ್ಥ ನದೀಮ್ ನುಸ್ರತ್! ಇಮ್ರಾನ್ ಖಾನ್ ಪಾಕ್ ಮಿಲಿಟರಿ ಕೈಗೊಂಬೆ ಎಂದ ನದೀಮ್

ನ್ಯೂಯಾರ್ಕ್(ಸೆ.29): ಪಾಕಿಸ್ತಾನ ಬದಲಾಗಿದೆ. ನಾ ಬಂದ್ಮೇಲಂತೂ ಪಾಕಿಸ್ತಾನಕ್ಕೆ ಶುಕ್ರದೆಸೆ ಪ್ರಾರಂಭವಾಗಿದೆ ಅಂತೆಲ್ಲಾ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಗ್ರೌಂಡ್ ರಿಯಾಲಿಟಿಯನ್ನು ಪಾಕಿಸ್ತಾನದವರೇ ಆದ ಹೋರಾಟಗಾರರೊಬ್ಬರು ಬಿಚ್ಚಿಟ್ಟಿದ್ದಾರೆ ನೋಡಿ.

ಪ್ರಸ್ತುತ ಪಾಕಿಸ್ತಾನ ಸರ್ಕಾರವನ್ನು ಮಿಲಿಟರಿ ಕೈಗೊಂಬೆ ಎಂದು ಪಾಕ್ ಮೂಲದ ಹೋರಾಟಗಾರ, ವಾಯ್ಸ್ ಆಫ್ ಕರಾಚಿ ಮುಖ್ಯಸ್ಥ ನದೀಮ್ ನುಸ್ರತ್ ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಎಲ್ಲವೂ ಬದಲಾಗಿದೆ ಎಂದು ಜಗತ್ತು ಭಾವಿಸಿದರೆ ಅದು ಮೂರ್ಖತನದ ಪರಮಾವಧಿ ಎಂದು ನದೀಮ್ ಅಭಿಪ್ರಾಯಪಟ್ಟಿದ್ದಾರೆ.

Scroll to load tweet…

ಪ್ರಸ್ತುತ ಪಾಕಿಸ್ತಾನದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಿಲಿಟರಿ ಕೈಗೊಂಬೆಯಾಗಿದ್ದು, ಇಮ್ರಾನ್ ಖಾನ್ ಅತ್ಯಂತ ದುರ್ಬಲ ಪ್ರಧಾನಿ ಎಂದು ನದೀಮ್ ಹೇಳಿದ್ದಾರೆ. ಇಮ್ರಾನ್ ಏನೇ ಹೇಳಿದರೂ ಪಾಕಿಸ್ತಾನದಲ್ಲಿ ಮಿಲಿಟರಿ ತೀರ್ಮಾನವೇ ಅಂತಿಮ ಎಂದು ನದೀಮ್ ಅಭಿಪ್ರಾಯಪಟ್ಟಿದ್ದಾರೆ.

ಭಾರತದೊಂದಿಗೆ ಸಂಬಂಧ ಸುಧಾರಣೆ ಎಂಬುದು ಇಮ್ರಾನ್ ಆಡುತ್ತಿರುವ ನಾಟಕ ಎಂದಿರುವ ನದೀಮ್, ಪಾಕ್ ನ ಐಎಸ್ ಐ ಎಂದಿಗೂ ಭಾರತದೊಂದಿಗೆ ಸಂಬಂಧ ಸುಧಾರಣೆಯಾಗಲು ಅನುವು ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ. 

ಐಎಸ್‌ಐ ಇರೋವರೆಗೂ ಭಾರತದೊಂದಿಗೆ ಸಂಬಂಧ ಸುಧಾರಣೆ ಸಾಧ್ಯವಿಲ್ಲ ಎಂಬುದು ಸತ್ಯ ಎಂದು ನದೀಮ್ ಹೇಳಿದ್ದು, ಪಾಕ್ ವಿರುದ್ಧವೇ ಧ್ವನಿ ಎತ್ತಿರುವ ಪಾಕ್ ಪತ್ರಕರ್ತನ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.