Asianet Suvarna News Asianet Suvarna News

ಇತಿಹಾಸದ ಪುಟ ಸೇರಲಿದೆಯಾ ನ್ಯಾನೋ ಕಾರು..?

ಟಾಟಾ ನ್ಯಾನೋ ಯೋಜನೆಯಿಂದ ಕಂಪನಿಗೆ 6,400 ಕೋಟಿ ರುಪಾಯಿ ನಷ್ಟವಾಗಿದೆ ಎಂದು ಟಾಟಾ ಕಂಪನಿ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಹೇಳಿದ್ದರು.

Is the end of the road near for Tata Nano

ನವದೆಹಲಿ(ಏ.16): ವಿಶ್ವದ ಅತಿ ಅಗ್ಗದ ಕಾರು ಎಂಬ ಪ್ರಚಾರದೊಂದಿಗೆ ರಸ್ತೆಗಿಳಿದಿದ್ದ ಟಾಟಾ ನ್ಯಾನೋ ಕಾರಿನ ಅಂತಿಮ ಪಯಣ ಆರಂಭ​ವಾಗಿದೆಯೇ? ಹೌದು. ಅಂಕಿ-ಅಂಶಗಳನ್ನು ಗಮನಿಸಿದಾಗ ಇದು ನಿಜವಾಗಲಿದೆ ಎಂದೆನಿಸುತ್ತಿದೆ.

ಮಾರ್ಚ್ 2009ರಲ್ಲಿ ಮಾರುಕಟ್ಟೆ ಪ್ರವೇಶಿಸಿದ ನ್ಯಾನೋ ಕಾರಿನ ಮಾರಾಟ ಈಗ ಪಾತಾಳಕ್ಕೆ ಕುಸಿದಿದೆ. ಮಾರ್ಚ್ 2017ರಲ್ಲಿ ಇಡೀ ದೇಶದಲ್ಲಿ ಕೇವಲ 174 ಕಾರುಗಳು ಮಾರಾಟವಾಗಿವೆ. ಇದೇ ರೀತಿ 2016ರ ಏಪ್ರಿಲ್‌ನಿಂದ 2017ರ ಮಾರ್ಚ್ ವರೆಗೆ ಕೇವಲ 7591 ನ್ಯಾನೋ ಕಾರುಗಳು ಮಾರಾಟವಾಗಿವೆ.

2015-16ರಲ್ಲಿ 21,012 ಕಾರು ಮಾರಾಟವಾ​ಗಿದ್ದವು. ಹೀಗಾಗಿ ಈಗ ಮಾರಾಟದ ಕುಸಿತದ ಪ್ರಮಾಣ ಶೇ.63ರಷ್ಟಿದೆ. 1 ಲಕ್ಷ ರುಪಾಯಿ ಕಾರು ಎಂದೇ ಖ್ಯಾತಿ ಪಡೆದಿರುವ ನ್ಯಾನೋ ಉದ್ಘಾಟನೆಗೊಂಡಾಗ 2 ಲಕ್ಷ ಬುಕ್ಕಿಂಗ್‌'ಗಳಾಗಿದ್ದವು. ಅಂತಾರಾಷ್ಟ್ರೀಯ ಮಟ್ಟ​ದಲ್ಲೂ ಸುದ್ದಿ ಮಾಡಿತ್ತು. ಆದರೆ ಕಾರಿನ ತಾಂತ್ರಿಕತೆಯಲ್ಲಿ ದೋಷಗಳು, ಕೆಲವೊಮ್ಮೆ ಕಾರಿನಲ್ಲಿ ಏಕಾಏಕಿ ಆದ ಬೆಂಕಿ ದುರಂತಗಳ ಕಾರಣ, ನ್ಯಾನೋ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡತೊಡಗಿ ಜನಪ್ರಿಯತೆ ಇಳಿಯಿತು. ಹೀಗಾಗಿ ನ್ಯಾನೋ ಉತ್ಪಾದನೆಗೆಂದೇ ನಿರ್ಮಿಸಲಾಗಿದ್ದ ಗುಜರಾತ್‌'ನ ಸಾನಂದ್‌ ನ್ಯಾನೋ ಕಾರು ನಿರ್ಮಾಣ ಘಟಕ ಈಗ ಟಾಟಾದ ಟಿಯಾಗೋ ಹ್ಯಾಚ್‌'ಬ್ಯಾಕ್‌ ಮತ್ತು ಟೈಗರ್‌ ಸೆಡಾನ್‌ ಕಾರುಗಳ ಉತ್ಪಾದನೆಯಲ್ಲಿ ಬ್ಯುಸಿಯಾಗಿದೆ.

ಮಾಸಿಕ 20 ಸಾವಿರ ನ್ಯಾನೋ ಕಾರು ಉತ್ಪಾದನೆ ಸಾಮರ್ಥ್ಯ ಹೊಂದಿದ್ದ ಸಾನಂದ್‌ ಘಟಕದಲ್ಲಿ ನ್ಯಾನೋ ಉತ್ಪಾದನೆ ಈಗ ಶೇ.20ಕ್ಕಿಳಿದಿದೆ. ಟಾಟಾ ನ್ಯಾನೋ ಯೋಜನೆಯಿಂದ ಕಂಪನಿಗೆ 6,400 ಕೋಟಿ ರು. ನಷ್ಟವಾಗಿದೆ ಎಂದು ಟಾಟಾ ಕಂಪನಿ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಹೇಳಿದ್ದರು.

Follow Us:
Download App:
  • android
  • ios