ನಿಮಗೆ ದಲಿತರ ಬಗ್ಗೆ ಕಾಳಜಿಯಿದ್ರೆ ನಿಮ್ಮನೆ ಹೆಣ್ಮಕ್ಕಳನ್ನ ಅವರಿಗೆ ಕೊಡಿ, ಅವರ ಮನೆಯ ಹೆಣ್ಮಕ್ಕಳನ್ನ  ನಿಮ್ಮ ಮನೆಯ ಮಕ್ಕಳೊಂದಿಗೆ ಮದುವೆ ಮಾಡಿಸಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.

ಬೆಂಗಳೂರು (ಜು.12): ನಿಮಗೆ ದಲಿತರ ಬಗ್ಗೆ ಕಾಳಜಿಯಿದ್ರೆ ನಿಮ್ಮನೆ ಹೆಣ್ಮಕ್ಕಳನ್ನ ಅವರಿಗೆ ಕೊಡಿ, ಅವರ ಮನೆಯ ಹೆಣ್ಮಕ್ಕಳನ್ನ ನಿಮ್ಮ ಮನೆಯ ಮಕ್ಕಳೊಂದಿಗೆ ಮದುವೆ ಮಾಡಿಸಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯಗೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಾಧ್ಯಕ್ಷರೇನು ದಲಿತರ ಮನೆಯಿಂದ ಹುಡುಗಿ ತಂದಿದ್ದಾರಾ? ಅವರು ಯಾರನ್ನು ಮದುವೆಯಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ದಿನೇಶ್ ಗುಂಡೂರಾವ್ ಹೆಸರು ಹೇಳದೇ ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್ ಪತ್ನಿ ಟಬೂ ರಾವ್, ನಾನು ಮುಸ್ಲೀಂ ಕುಟುಂಬದಲ್ಲಿ ಹುಟ್ಟಿದ್ದು, ನನ್ನ ಗಂಡ ಬ್ರಾಹ್ಮಣ. ಇದರಲ್ಲಿ ರಹಸ್ಯವೇನೂ ಇಲ್ಲ. ನಮ್ಮ ಮಧ್ಯೆ ಜಾತಿ, ಧರ್ಮದ ವಿಚಾರ ಬಂದಿಲ್ಲ. 20 ವರ್ಷಗಳಿಂದ ಸುಖವಾಗಿ ಸಂಸಾರ ಮಾಡಿದ್ದೇವೆ. ನಾವು ಮತಾಂತರ ಹೊಂದದೇ ಅವರವರ ಧರ್ಮದ ಪದ್ಧತಿಗಳನ್ನು ಗೌರವಿಸಿ ಅನುಸರಿಸಿದ್ದೇವೆ. ಶೋಭಾ ಕರಂದ್ಲಾಜೆ ಹೇಳಿಕೆ ಅಸಮಾಧಾನ ತಂದಿದೆ. ತಮ್ಮ ರಾಜಕೀಯ ಸಂಕುಚಿತ ಬುದ್ದಿಯಿಂದ ನಮ್ಮ ಖಾಸಗಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದಿದ್ದಾರೆ.