ಕ್ಯಾನ್ಸರ್ ಪೀಡಿತ ನಟ ಇರ್ಫಾನ್ ಖಾನ್ ಹೊಸ ಲುಕ್ ನಲ್ಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 16, Jul 2018, 11:07 AM IST
Irrfan Khan Shares New Pic In Twitter
Highlights

ನ್ಯೂರೋಎಂಡೊಕ್ರೈನ್ ಟ್ಯೂಮರ್ (ಕ್ಯಾನ್ಸರ್)ನಿಂದ ಗುಣಮುಖವಾಗಲು ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ತಮ್ಮ ಟ್ವೀಟರ್‌ನ ಪ್ರೊಫೈಲ್ ಫೋಟೊ ಬದಲಾವಣೆ ಮಾಡಿದ್ದಾರೆ. 

ಮುಂಬೈ: ನ್ಯೂರೋಎಂಡೊಕ್ರೈನ್ ಟ್ಯೂಮರ್ (ಕ್ಯಾನ್ಸರ್)ನಿಂದ ಗುಣಮುಖವಾಗಲು ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ತಮ್ಮ ಟ್ವೀಟರ್‌ನ ಪ್ರೊಫೈಲ್ ಫೋಟೊ ಬದಲಾವಣೆ ಮಾಡಿದ್ದಾರೆ.

ಇರ್ಫಾನ್ ಅವರು ಫೋಟೊ ಬದಲಾವಣೆ ಮಾಡುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದೆ. 

ಈ ಫೋಟೊದಲ್ಲಿ ಅರಿಶಿನ ಬಣ್ಣದ ಟೀ-ಷರ್ಟ್, ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಗಾಜಿನ ಕಿಟಕಿ ಬಳಿ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದು, ಮೊದಲಿಗಿಂತಲೂ ಲವಲವಿಕೆ ಯಲ್ಲಿದ್ದಂತೆ ಹಾಗೂ ಚೇತರಿಸಿಕೊಂಡಂತೆ ಕಾಣುತ್ತಿದ್ದಾರೆ.

loader