ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಂತೆ 'ಸುವಿಧಾ ಟ್ರೈನ್’ ಎಂಬ ಯೋಜನೆ ಕೂಡ ಜಾರಿಗೆ ಬಂದಿದ್ದು, ಪ್ರಯಾಣಿಕಾರು ಇದರ ಲಾಭ ಪಡೆಯಬಾಹುದಾಗಿದೆ.

ನವದೆಹಲಿ[ಮೇ. 23): ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅದರಂತೆ 'ಸುವಿಧಾ ಟ್ರೈನ್’ ಎಂಬ ಯೋಜನೆ ಕೂಡ ಜಾರಿಗೆ ಬಂದಿದ್ದು, ಪ್ರಯಾಣಿಕಾರು ಇದರ ಲಾಭ ಪಡೆಯಬಾಹುದಾಗಿದೆ.

ಹೆಚ್ಚು ಬೇಡಿಕೆ ಇರುವ ರೂಟ್ ಗಳಿಗೆ ಸುವಿಧಾ ಟ್ರೈನ್ ಯೋಜನೆ ಮೂಲಕ ವಿಶೇಷ ರೈಲುಗಳನ್ನು ಓಡಿಸಲಾಗುತ್ತದೆ. ನಿಗದಿತ ರೈಲುಗಳು ಭರ್ತಿಯಾದರೆ ಸುವಿಧಾ ವಿಶೇಷ ರೈಲುಗಳು ಅದೇ ಮಾರ್ಗಕ್ಕೆ ಸೇವೆ ಒದಗಿಸುತ್ತವೆ.

ಇನ್ನು ಸುವಿಧಾ ಟ್ರೈನ್ ಯೋಜನೆಯ ವಿಶೇಷತೆಗಳನ್ನು ಗಮನಿಸುವುದಾದರೆ...

1. ಸಾಮಾನ್ಯ ರೈಲುಗಳಿಗಿಂತ ಹೆಚ್ಚಿನ ದರವನ್ನು ಸುವಿಧಾ ರೈಲುಗಳಿಗೆ ಪಾವತಿಸಬೇಕಾಗುತ್ತದೆ.

2. ಈ ರೈಲುಗಳಿಗೆ ಆನ್ ಲೈನ್ ಮೂಲಕವೂ ಸೀಟುಗಳನ್ನು ಬುಕ್ ಮಾಡಬಹುದಾಗಿದೆ.

3. ಸುವಿಧಾ ರೈಲುಗಳಿಗೆ ಪ್ರಯಾಣಿಕರು ಸಂಪೂರ್ಣ ದರ ಪಾವತಿಸಬೇಕಾಗಿದ್ದು, ಇದಕ್ಕೆ ವಯಸ್ಸಿನ ನಿರ್ಬಂಧವಿಲ್ಲ

4. 120 ದಿನಕ್ಕೂ ಮೊದಲೇ ಟಿಕೆಟ್ ಕಾಯ್ದಿರಿಸಬುದಾಗಿದೆ

5. ಇ-ಟಿಕೆಟ್ ಪ್ರಯಾಣಿಕರು ಪ್ರಯಾಣದ ಸಂದರ್ಭದಲ್ಲಿ ತಮ್ಮ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ