ದುರ್ಘಟನೆಯ ಸ್ಥಳವು ಹೆಚ್ಚು ಸಂಪರ್ಕ ಹೊಂದಿರದ ಕಾರಣ ರಕ್ಷಣಾ ಕಾರ್ಯಗಳು ವಿಳಂಬವಾಗಿದೆ ಎನ್ನಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ.
ಇರಾನ್(ನ. 26): ಭೀಕರ ಅಪಘಾತಕ್ಕೆ 44ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಇರಾನ್'ನ ಸೆಮ್ನಾನ್ ಪ್ರಾಂತ್ಯದಲ್ಲಿ ಸಂಭವಿಸಿದೆ. ಶಾಹರೂದ್ ನಗರದ ಬಳಿ ಎರಡು ಪ್ಯಾಸೆಂಜರ್ ರೈಲುಗಳು ಮುಖಯಾಮುಖಿಯಾಗಿ ಸಂಭವಿಸಿದ ಈ ಅಪಘಾತದಲ್ಲಿ ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತಗೊಂಡ ರಭಸಕ್ಕೆ ಒಂದು ಟ್ರೈನಿನ ನಾಲ್ಕು ಬೋಗಿಗಳು ಹಳಿ ತಪ್ಪಿ ಕೆಳಗುರುಳಿವೆ. ಎರಡು ಬೋಗಿಗಳಿಗೆ ಬೆಂಕಿ ತಗುಲಿದೆ.
ದುರ್ಘಟನೆಯ ಸ್ಥಳವು ಹೆಚ್ಚು ಸಂಪರ್ಕ ಹೊಂದಿರದ ಕಾರಣ ರಕ್ಷಣಾ ಕಾರ್ಯಗಳು ವಿಳಂಬವಾಗಿದೆ ಎನ್ನಲಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಅಪಾಯವಿದೆ.