ಭಾರ್ತಿ ಏರ್'ಟೆಲ್ ಸಂಸ್ಥೆಯು ಈ ಐಫೋನ್ ಸ್ಕೀಮ್'ಗಾಗಿ ಆ್ಯಪಲ್, ಎಚ್'ಡಿಎಫ್'ಸಿ ಬ್ಯಾಂಕ್, ಕ್ಲಿಕ್ಸ್ ಕ್ಯಾಪಿಟಲ್, ಸೇನ್ಸ್ ಟೆಕ್ನಾಲಜೀಸ್, ಬ್ರೈಟ್'ಸ್ಟಾರ್ ಟೆಲಿಕಮ್ಯೂನಿಕೇಶನ್ಸ್ ಮತ್ತು ವುಲ್ಕಾನ್ ಎಕ್ಸ್'ಪ್ರೆಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನವದೆಹಲಿ(ಅ. 17): ಕೇವಲ 7,777 ರೂ ಡೌನ್'ಪೇಮೆಂಟ್'ನಲ್ಲಿ ಐಫೋನ್ 7 (32ಜಿಬಿ) ಸ್ಮಾರ್ಟ್'ಫೋನ್ ಪಡೆಯಿರಿ. ಇಂಥದ್ದೊಂದು ಆಫರ್'ನ್ನು ಏರ್'ಟೆಲ್ ಸಂಸ್ಥೆ ಪ್ರಕಟಿಸಿದೆ. ಮಿಕ್ಕ ಹಣವನ್ನು 2 ವರ್ಷಗಳವರೆಗೆ 2,499 ರೂ ಇಎಂಐ ಮೂಲಕ ಕಟ್ಟಬಹುದಾಗಿದೆ. ಈ ಎರಡು ವರ್ಷ ನಿಮಗೆ ಏರ್'ಟೆಲ್'ನ ಡೇಟಾ ಪ್ಯಾಕೇಜ್'ಗಳು ಸಿಗಲಿವೆ. ಈ 2,499 ರೂ ಇಎಂಐನಲ್ಲಿ ತಿಂಗಳಿಗೆ 30ಜಿಬಿ ಡೇಟಾ ಮತ್ತು ಅನ್'ಲಿಮಿಟೆಡ್ ಕರೆಗಳು ಲಭ್ಯವಿರಲಿದೆ. ನಿಮಗೆ ಏರ್'ಟೆಲ್'ನ ಪ್ಯಾಕೇಜ್'ಗಳು ಬೇಡವೆನಿಸಿದರೆ ಯಾವಾಗ ಬೇಕಾದರೂ ಇಎಂಐ ಸ್ಕೀಮ್'ನಿಂದ ಹೊರಬೀಳಬಹುದು. ಆದರೆ, ಬಾಕಿ ಉಳಿದಿರುವ ಹಣವನ್ನು 7 ದಿನಗಳೊಳಗೆ ತೀರಿಸಬೇಕು.

ಭಾರ್ತಿ ಏರ್'ಟೆಲ್ ಸಂಸ್ಥೆಯು ಈ ಐಫೋನ್ ಸ್ಕೀಮ್'ಗಾಗಿ ಆ್ಯಪಲ್, ಎಚ್'ಡಿಎಫ್'ಸಿ ಬ್ಯಾಂಕ್, ಕ್ಲಿಕ್ಸ್ ಕ್ಯಾಪಿಟಲ್, ಸೇನ್ಸ್ ಟೆಕ್ನಾಲಜೀಸ್, ಬ್ರೈಟ್'ಸ್ಟಾರ್ ಟೆಲಿಕಮ್ಯೂನಿಕೇಶನ್ಸ್ ಮತ್ತು ವುಲ್ಕಾನ್ ಎಕ್ಸ್'ಪ್ರೆಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ನಿಮಗೆ ಬೇರೆ ಐಫೋನ್ ಮಾಡೆಲ್'ಗಳೂ ಈ ಸ್ಕೀಮ್'ನಲ್ಲಿ ಲಭ್ಯ. ಅದರ ಡೌನ್'ಪೇಮೆಂಟ್ ಮತ್ತು ಇಎಂಐಗಳು ಬೇರೆ ಬೇರೆ ಇರುತ್ತವೆ. ಏರ್'ಟೆಲ್'ನ ಸ್ಕೀಮ್ ಮುಖಾಂತರ ಐಫೋನ್ ಖರೀದಿಸಿದರೆ ಕನಿಷ್ಠ 7 ಸಾವಿರ ರೂ ಉಳಿತಾಯ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಐಫೋನ್ 7 ಸ್ಮಾರ್ಟ್'ಫೋನ್ ಸದ್ಯ ಮಾರುಕಟ್ಟೆಯಲ್ಲಿ 40 ಸಾವಿರ ರೂ ಆಸುಪಾಸಿಗೆ ಸಿಗುತ್ತದೆ. ಏರ್'ಟೆಲ್ ಆನ್'ಲೈನ್ ಸ್ಟೋರ್'ನಲ್ಲಿ ಈ ಸ್ಕೀಮ್ ಲಭ್ಯವಿದೆ.