Asianet Suvarna News Asianet Suvarna News

ನೂತನ ಭೂಸೇನಾ ಮುಖ್ಯಸ್ಥರ ಬಗ್ಗೆ ನೀವು ತಿಳಿದಿರಲೇ ಬೇಕಾದ ವಿಷಯಗಳು

ನೂತನ ಭೂಸೇನಾ ಮುಖ್ಯಸ್ಥರ ಬಗ್ಗೆ ನೀವು ತಿಳಿದಿರಲೇ ಬೇಕಾದ ವಿಷಯಗಳು

Introduction of New Army Chief
  • ಲೆ|ಜ| ಬಿಪಿನ್ ರಾವತ್ ಜನಿಸಿದ್ದು ಯೋಧರ ಕುಟುಂಬದಲ್ಲಿ.  ಬಿಪಿನ್ ರಾವತ್ ತಂದೆ ಲೆ|ಜ| ಎಲ್.ಎಸ್. ರಾವತ್ ಕೂಡಾ ಸೇನೆಯಲ್ಲಿ ಸೇವೆ ಸಲ್ಲಿಸಿದವರು.
  • ಲೆ|ಜ| ಬಿಪಿನ್ ರಾವತ್ ಶಿಕ್ಷಣ ಪಡೆದದ್ದು ಶಿಮ್ಲಾದ ಸಂತ ಎಡ್ವರ್ಡ್ ಶಾಲೆಯಲ್ಲಿ. ಬಳಿಕ  ಡೆಹ್ರಾಡೂನ್’ನ ‘ಇಂಡಿಯನ್ ಮಿಲಿಟರಿ ಅಕಾಡೆಮಿ’ಯಲ್ಲಿ ತರಬೇತಿ. ಅಲ್ಲಿ ‘ಸೋರ್ಡ್ ಆಫ್ ಆನರ್’ ಗೌರವಕ್ಕೆ ಪಾತ್ರ.
  • ವೆಲಿಂಗ್ಟನ್’ನಲ್ಲಿರುವ  ಕೇಂದ್ರ ಸರ್ಕಾರದ ’ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿ’ನಿಂದ ಪದವಿ, ಬಳಿಕ ಻ಮೆರಿಕಾದ ‘ಫೋರ್ಟ್ ಲೀವಿನ್ವರ್ತ್’ ನಿಂದ ತರಬೇತಿ.
  • 1978ರಲ್ಲಿ 11 ಗೋರ್ಖಾ ರೈಫಲ್ಸ್’ನ 5ನೇ ಬೆಟಾಲಿಯನ್’ಗೆ ಸೇರಿ ಸೇವೆ ಆರಂಭ.
  • 37 ವರ್ಷಗಳ ಸೇವೆಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ, ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಣೆ. ಭಾರತದ ಪೂರ್ವ ಗಡಿ ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ.
  • ಈ ಮಧ್ಯೆ ವಿಶ್ವಸಂಸ್ಥೆಯ ಮಿಶನ್ ಮೇಲೆ ಕಾಂಗೋದಲ್ಲಿ ಕಠಿಣ ಸವಾಲುಗಳ ನಡುವೆಯೂ ಅಪ್ರತಿಮ ಸೇವೆ ಸಲ್ಲಿಸಿ ಅಂತರಾಷ್ಟ್ರೀಯ ಗೌರವಗಳಿಗೆ ಪಾತ್ರ.
  • ಭಾರತದಲ್ಲಿಯೂ ಹಲವಾರು ಗೌರವ ಹಾಗೂ ಶೌರ್ಯ ಪ್ರಶಸ್ತಿಗಳಿಗೆ ಭಾಜನ.
  • ಸೇವೆ ಜತೆ ಸಂಶೋಧನೆ; ಸೇನಾ ಮಾಧ್ಯಮ ನೀತಿ ಕುರಿತು ಸಂಶೋಧನೆ; ಮೀರಠ್’ನ  ಚೌಧರಿ ಚರಣ್ ಸಿಂಗ್ ವಿವಿಯಿಂದ 2011ರಲ್ಲಿ ಡಾಕ್ಟರೇಟ್ ಪದವಿ.
  • ರಾವತ್ ಅವರ ಪತ್ನಿ ಮಧುಲಿಕಾ ದೆಹಲಿ ವಿವಿಯಿಂದ ಸೈಕಲಾಜಿ ಪದವಿಧರೆ; ಹಲವಾರು ಸಮಾಜ ಸೇವಾ ಕೆಲಸಗಳಲ್ಲಿ, ವಿಶೇಷವಾಗಿ ಕ್ಯಾನರ್ ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹಿಳೆ.
  • ಸೇನಾಧಿಕಾರಿ ಜತೆಗೆ ಅಂಕಣಕಾರನೂ ಹೌದು; ದೇಶದ ಸುರಕ್ಷತೆ ಹಾಗೂ ಭದ್ರತೆ ವಿಷಯದಲ್ಲಿ ವಿವಿಧ ಪತ್ರಿಕೆ ಹಾಗೂ ಜರ್ನಲ್’ಗಳಲ್ಲಿ ಲೇಖನ ಪ್ರಕಟ
  • 1 ಜನವರಿ 2016ರಿಂದ ಭೂಸೇನೆಯ ಉಪ-ಮುಖ್ಯಸ್ಥನಾಗಿ ಅಧಿಕಾರ ಸ್ವೀಕಾರ
  • 17 ಡಿಸೆಂಬರ್ 2016ಗೆ ನೂತನ ಭೂಸೇನಾ ಮುಖ್ಯಸ್ಥರಾಗಿ ನೇಮಕ
Follow Us:
Download App:
  • android
  • ios