ಪಾಕಿಸ್ತಾನ ದೇಶವನ್ನು ಉಗ್ರರಾಷ್ಟ್ರವೆಂದು ಘೋಷಿಸಬೇಕೆಂದು ಆಗ್ರಹಿಸಿ ಇವತ್ತು ಪಾರ್ಲಿಮೆಂಟ್'ನಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಖಾಸಗಿ ಮಸೂದೆ ಮಂಡಿಸಲಿದ್ದಾರೆ.
ನವದೆಹಲಿ(ಜು.28): ಪಾಕಿಸ್ತಾನ ದೇಶವನ್ನು ಉಗ್ರರಾಷ್ಟ್ರವೆಂದು ಘೋಷಿಸಬೇಕೆಂದು ಆಗ್ರಹಿಸಿ ಇವತ್ತು ಪಾರ್ಲಿಮೆಂಟ್'ನಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಖಾಸಗಿ ಮಸೂದೆ ಮಂಡಿಸಲಿದ್ದಾರೆ.
ಇದಕ್ಕೂ ಮೆದಲು ಮಾತನಾಡಿದ ಅವರು, ಪಾಕಿಸ್ತಾನವನ್ನು ಉಗ್ರ ಪೋಷಕ ರಾಷ್ಟ್ರವೆಂದು ಘೋಷಿಸಲು ಇದು ಸಕಾಲ. ಇವತ್ತು ಪಾರ್ಲಿಮೆಂಟ್'ನಲ್ಲಿ ಮತ್ತೆ ನಿರ್ಣಯದ ಪ್ರಸ್ತಾವನೆ ಸಲ್ಲಿಸಿ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇನೆ ಅಂತ ಹೇಳಿದ್ದಾರೆ.
