ಇಷ್ಟು ದಿನ ನಮ್ಮ ಕರ್ನಾಟಕ ಕಾಯ್ದುಕೊಂಡುಬಂದಿದ್ದ ಅಗ್ರ ಸ್ಥಾನ ಇದೀಗ ಮಧ್ಯಪ್ರದೇಶದ ಪಾಲಾಗಿದೆ. ವಿಶ್ವ ಹುಲಿ ದಿನದ ಸಂದರ್ಭ ನಾವು ಮತ್ತೊಮ್ಮೆ ಪ್ರಾಣಿ ಪ್ರೀತಿ ಮತ್ತು ಪರಿಸರ ಕಾಳಜಿ ನೆನಪು ಮಾಡಿಕೊಳ್ಳಬೇಕಾಗಿದೆ.
ನವದೆಹಲಿ[ಜು29] ಮಧ್ಯ ಪ್ರದೇಶದಲ್ಲಿ ಈಗ 1,432 ಹುಲಿಗಳು ಇವೆ ಎಂಬ ಅಂಶವನ್ನು ಗಣತಿ ಹೇಳಿದೆ. ಅಖಿಲ ಭಾರತ ಹುಲಿ ಗಣತಿಯ ಮೊದಲ ಚರಣದಲ್ಲಿ ಈ ಸಂಖ್ಯೆ ಗೊತ್ತಾಗಿದೆ. 1995ರಲ್ಲಿ ಮಧ್ಯಪ್ರದೇಶ ಹುಲಿ ರಾಜ್ಯ ಎಂಬ ಗೌರವಕ್ಕೆ ಪಾತ್ರವಾಗಿತ್ತು ಆದರೆ 2011 ರಲ್ಲಿ ಆ ಶ್ರೇಯವನ್ನು ಕರ್ನಾಟಕ ಪಡೆದುಕೊಂಡಿತ್ತು.
ಸಸ್ಯ ಪ್ರಪಂಚದಲ್ಲಿ 3,890 ಹುಲಿಗಳಿವೆ ಅದರಲ್ಲಿ 2,226 ಹುಲಿಗಳು ಭಾರತದಲ್ಲೇ ಇವೆ. ಹುಲಿ ಸಂರಕ್ಷಣೆಗೆ ಸರಕಾರ ಕೈಗೊಂಡ ಕ್ರಮಗಳು, ಜಾಗೃತಿ ಕಾರ್ಯಕ್ರಮಗಳ ಪರಿಣಾಮ 2006ರಿಂದ ನಂತರ ದೇಶದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗಿದೆ.
ಒಂದು ಕಡೆ ಅಭಯಾರಣ್ಯ ಇನ್ನೊಂದು ನಿರ್ಮಾಣ, ವಿಶ್ವಸಂಸ್ಥೆಯ ನೆರವು ಮತ್ತು ಕಠಿಣ ಕಾನೂನು ಹುಲಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಧ್ಯ ಪ್ರದೇಶದ ಅಧಿಕಾರಿಗಳು ಕರ್ನಾಟಕ್ಕಿಂತ ನಮ್ಮಲ್ಲೇ ಹೆಚ್ಚಿನ ಸಂಖ್ಯೆಯ ಹುಲಿಗಳಿವೆ ಎಂದು ಹೇಳಿದ್ದು ಅಧಿಕೃತ ಘೋಷಣೆಗೆ ಇನ್ನು ಕಾಲ ಕೂಡಿ ಬಂದಿಲ್ಲ.
