ಮುಂದಿನ ಚುನಾವಣೆಗೆ ಸನ್ನದ್ಧವಾಗಿರೋ ಜೆಡಿಎಸ್ ವಿಕಾಸ ಯಾತ್ರೆಯನ್ನು ನಾಳೆಯಿಂದ ನಡೆಸಲಿದೆ. ಈ ಹಿನ್ನೆಲೆ ಇಂದು ದೇವೇಗೌಡರ ಕುಟುಂಬ ದೇವರಿಗೆ ವಿಶೇಷ ಪೂಜೆ ಸಲ್ಲಿಸಿತು. ಇದರ ಮಧ್ಯೆ ಜೆಡಿಎಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಜೋರಾಗಿದೆ. ಹಾಗೇ ಎಚ್'ಡಿಕೆ  ಕುಟುಂಬದಲ್ಲೂ ಟಿಕೆಟ್ ಫೈಟ್ ನಡೆಯುತ್ತಿದ್ದು, ಮತ್ತೊಮ್ಮೆ ಇಂದು ಬಹಿರಂಗವಾಯಿತು.

ಬೆಂಗಳೂರು (ನ.06): ಮುಂದಿನ ಚುನಾವಣೆಗೆ ಸನ್ನದ್ಧವಾಗಿರೋ ಜೆಡಿಎಸ್ ವಿಕಾಸ ಯಾತ್ರೆಯನ್ನು ನಾಳೆಯಿಂದ ನಡೆಸಲಿದೆ. ಈ ಹಿನ್ನೆಲೆ ಇಂದು ದೇವೇಗೌಡರ ಕುಟುಂಬ ದೇವರಿಗೆ ವಿಶೇಷ ಪೂಜೆ ಸಲ್ಲಿಸಿತು. ಇದರ ಮಧ್ಯೆ ಜೆಡಿಎಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಜೋರಾಗಿದೆ. ಹಾಗೇ ಎಚ್'ಡಿಕೆ ಕುಟುಂಬದಲ್ಲೂ ಟಿಕೆಟ್ ಫೈಟ್ ನಡೆಯುತ್ತಿದ್ದು, ಮತ್ತೊಮ್ಮೆ ಇಂದು ಬಹಿರಂಗವಾಯಿತು.

ಬಿಜೆಪಿ, ಕಾಂಗ್ರೆಸ್ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಈಗಾಗಲೇ ಮತಬೇಟೆ ಆರಂಭಿಸಿವೆ. ಇವರ ಮಧ್ಯೆ ನಾನು ಹಿಂದೆ ಬಿದ್ದಿಲ್ಲ ಎಂದು ಜೆಡಿಎಸ್ ಮತಯಾತ್ರೆಗೆ ಸಜ್ಜಾಗಿದೆ. ನಾಳೆ ಮೈಸೂರಿನಿಂದ ಕುಮಾರಸ್ವಾಮಿ ವಿಕಾಸಯಾತ್ರೆ ಆರಂಭವಾಗುತ್ತಿದೆ. ಅದಕ್ಕೂ ಮುನ್ನ ದಿನವಾದ ಇಂದು ಗೌಡರು ಹಾಸನದ ಹರದನಹಳ್ಳಿಯ ಮನೆದೇವರು ಶಿವ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಇದೇ ವೇಳೆ ಗೌಡರ ಕುಟುಂಬದಲ್ಲಿನ ಟಿಕೆಟ್ ಫೈಟ್ ಬಹಿರಂಗಗೊಂಡಿದೆ.

ಭವಾನಿ ರೇವಣ್ಣ ಪ್ರಕಾರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತವಂತೆ. ದೇವೇಗೌಡರೇ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಬೇಲೂರು ಅಥವಾ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೇ? ಎಂಬುದನ್ನು ಸಮೀಕ್ಷೆ ನಡೆಸಿ ಗೌಡರೇ ತೀರ್ಮಾನಿಸುತ್ತಾರಂತೆ. ಆದರೆ ಪ್ರಜ್ವಲ್ ಸ್ಪರ್ಧೆ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷರನ್ನ ಕೇಳಿದ್ರೆ ಪ್ರಜ್ವಲ್ ಸ್ಪರ್ಧೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದ್ದರೆ ಅವರನ್ನೇ ಕೇಳಿ ಎಂದು ಹೇಳಿದರು.

ಗೌಡರ ಕುಟುಂಬದಲ್ಲಿ ಟಿಕೆಟ್​​ಗಾಗಿ ಫೈಟ್ ನಡೀತಿದೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ಇನ್ನೂ ಅನಿತಾ ಕುಮಾಸ್ವಾಮಿ ಸ್ಪರ್ಧೆ ಬಗ್ಗೆ ಪ್ರಶ್ನಿಸಿದಾಗ ಭವಾನಿ ರೇವಣ್ಣ ನೋ ಕಮೆಂಟ್ಸ್ ವರ್ತನೆ ಗೌಡರ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಎತ್ತಿ ತೋರಿಸುತ್ತೆ. ದೊಡ್ಡಗೌಡರು ಇದನ್ನೆಲ್ಲಾ ಹೇಗೆ ಬ್ಯಾಲೆನ್ಸ್ ಮಾಡ್ತಾರೆ ಅನ್ನೋದು ಸದ್ಯದ ಕುತೂಹಲ.