ತೀವ್ರ ಹೃದಯಾಘಾತದಿಂದ ಗದಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ಅವರ ಬಗ್ಗೆ ನಿಮಗೆ ತಿಳಿದಿರದ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.

ಗದಗ : ತೀವ್ರ ಹೃದಯಾಘಾತದಿಂದ ಗದಗಿನ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. ನಿನ್ನೆ ರಾತ್ರಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದ ಶ್ರೀಗಳಿಗೆ ಮಠದ ತಮ್ಮ ಕೊಠಡಿಯಲ್ಲಿ ನಿದ್ರೆ ಮಾಡುವ ವೇಳೆಯಲ್ಲೇ ಹೃದಯಘಾತವಾಗಿದೆ ಎನ್ನಲಾಗಿದೆ. 

ಇನ್ನು ನಾಡಿನ ಬಗ್ಗೆ ಅಪಾರವಾದ ಕಾಳಜಿಹೊಂದಿದ್ದ ಶ್ರೀಗಳು ಬಸವಣ್ಣನ ಆಶಯಗಳಿಗೆ ಅನುಗುಣವಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದ ಮಹಾನ್ ಮೇದಾವಿಯಾಗಿದ್ದರು. 

ಇನ್ನು ಶ್ರೀಗಳ ಸಾವು, ಅಪಾರವಾದ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ. 

ಶ್ರೀಗಳ ಬಗ್ಗೆ ಇನ್ನಷ್ಟು

ಇವರು ಪುಸ್ತಕಗಳ ಸ್ವಾಮೀಜಿ ಎಂದು ಗುರುತಿಸಿಕೊಂಡಿದ್ದರು : ಪುಸ್ತಕ ಪ್ರೇಮಿಯಾಗಿದ್ದು, ಸಾಕಷ್ಟು ಓದುವ ಹ್ಯಾಸವನ್ನು ಹೊಂದಿರುವ ಹಿನ್ನೆಲೆಯಲ್ಲಿ ಪುಸ್ತಕ ಸ್ವಾಮೀಜಿ ಎಂದು ಕರೆಸಿಕೊಂಡಿದ್ದರು.

ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ಸೇರಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದರು : ಸಾಕಷ್ಟು ಹೋರಾಟಗಳಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದರು.

ಸ್ವಾಮೀಜಿ ನೇತೃತ್ವದಲ್ಲಿ ಮಠದಲ್ಲಿ ಪ್ರತಿವಾರ ಶಿವಾನುಭವ ಕಾರ್ಯಕ್ರಮ ಆಯೋಜನೆ 

ಸಾಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ, ಕೃಷಿ, ಗ್ರಾಮೀಣ, ಮಾನವಶಾಸ್ತ್ರದ ವಿಷಯಗಳ ಚರ್ಚೆ : ಹಲವು ವಿಚಾರಗಳ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದ ಅವರು ವಿವಿಧ ಚರ್ಚಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.

ಎಂ.ಎಂ.ಕಲಬುರಗಿ ಅವರ ವಿದ್ಯಾರ್ಥಿಯಾಗಿದ್ದ ಸಿದ್ದಲಿಂಗ ಸ್ವಾಮೀಜಿ : ಗುಂಡೇಟಿಗೆ ಬಲಿಯಾಗಿದ್ದ ಸಾಹಿತಿ ಎಂ.ಎಂ.ಕಲಬುರಗಿ ಅವರ ಶಿಷ್ಯರಾಗಿದ್ದರು.

ಗುರು ಶಿಷ್ಯರಿಬ್ಬರು ಸಹ ವಿಜಯಪುರ ಜಿಲ್ಲೆ ಸಿಂಧಗಿ ಮೂಲದವರು 

 ಅಸಂಖ್ಯಾತ ಭಕ್ತ ಸಮೂಹವನ್ನ ಹೊಂದಿದ್ದ ಸಿದ್ದಲಿಂಗ ಸ್ವಾಮೀಜಿ