ಕೋಲಾರ (ಏ. 03): ಮಗಳು  ಅಂತರ್ಜಾತಿ ವಿವಾಹ ಮಾಡಿಕೊಂಡಳೆಂದು ಬೇಸತ್ತ ಹುಡುಗಿ ತಂದೆ  ಪೊಲೀಸ್ ಠಾಣೆ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.  

ಬೆಂಗಳೂರು ಮೂಲದ ಶಂಕರ್ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಒಂದು ವಾರದ ಹಿಂದೆ ಮಗಳು ದಿವ್ಯಾ ಪ್ರೀತಿಸಿ ಹರಿಕೃಷ್ಣ ಎಂಬುವನನ್ನು ಮದುವೆಯಾಗಿದ್ದಳು. ಇಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗಳನ್ನು ಕಂಡು ಮನನೊಂದು  ತಂದೆ  ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಅಸ್ವಸ್ಥ ಶಂಕರ್ ಪ್ರಸಾದ್’ರನ್ನು  ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.