Asianet Suvarna News Asianet Suvarna News

ಬಿಲ್ಡರ್'ಗಳ ಜೊತೆ ಸಂಪರ್ಕ: ಆಡಳಿತ ವರ್ಗದ ವಿರುದ್ಧ ತಜ್ಞರ ಆಕ್ರೋಶ

ಬಿಲ್ಡರ್​ಗಳು ನುಂಗಿ ನೀರು ಕುಡಿದ್ದಿದಾರೆ. ಈಗ ನಮ್ಮ ಕೆರೆಗಳನ್ನು ರಕ್ಷಿಸಿ ಮತ್ತು ಹಿಂಪಡೆಯುವ ದಿನ ಬಂದಿದೆ. ಇದಕ್ಕಾಗಿ ಸಿಟಿಜನ್​ ಆಕ್ಷನ್​ ಫಾರ್ಮ್, ಸಿಟಿಜನ್​ ಆಫ್​ ಬೆಂಗಳೂರು , ದಿ ಫಾರವರ್ಡ್ ಫೌಂಡೇಷನ್​ , ನಾಗರೀಕರ ಕಾವಲು ಸಮಿತಿ ಹಾಗೂ ನಮ್ಮ ಬೆಂಗಳೂರು ಪೌಂಡೇಷನ್ ಸಂಸ್ಥೆಗಳ ವತಿಯಿಂದ  ರಾಜಧಾನಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಇಂದು  ಮುಕ್ತ ಚರ್ಚೆ ಜರುಗಿತು.

Interactive session on reclaiming and protecting our lakes
  • Facebook
  • Twitter
  • Whatsapp

ಬೆಂಗಳೂರು(ಮೇ.13): ನಮ್ಮ ಬೆಂಗಳೂರು ಹಲವು ಶತಮಾನಗಳ ಹೆಮ್ಮೆಯ ಇತಿಹಾಸವನ್ನು ಹೊಂದಿರುವ ಜಾಗತಿಕ ನಗರವಾಗಿದೆ.  ಲಕ್ಷಾಂತರ ಜನರಿಗೆ ಆಶ್ರಯ ನೀಡಿರುವ ಸುಂದರ ನಗರ ಕೂಡಾ ಹೌದು. ಈಗ ಬೆಂಗಳೂರಿನಲ್ಲಿ ಇರುವ ಅದೇಷ್ಟೋ ಕೆರೆಗಳು ನಾಪತ್ತೆ ಯಾಗುತ್ತಿವೆ .

ಬಿಲ್ಡರ್​ಗಳು ನುಂಗಿ ನೀರು ಕುಡಿದ್ದಿದಾರೆ. ಈಗ ನಮ್ಮ ಕೆರೆಗಳನ್ನು ರಕ್ಷಿಸಿ ಮತ್ತು ಹಿಂಪಡೆಯುವ ದಿನ ಬಂದಿದೆ. ಇದಕ್ಕಾಗಿ ಸಿಟಿಜನ್​ ಆಕ್ಷನ್​ ಫಾರ್ಮ್, ಸಿಟಿಜನ್​ ಆಫ್​ ಬೆಂಗಳೂರು , ದಿ ಫಾರವರ್ಡ್ ಫೌಂಡೇಷನ್​ , ನಾಗರೀಕರ ಕಾವಲು ಸಮಿತಿ ಹಾಗೂ ನಮ್ಮ ಬೆಂಗಳೂರು ಪೌಂಡೇಷನ್ ಸಂಸ್ಥೆಗಳ ವತಿಯಿಂದ  ರಾಜಧಾನಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಇಂದು  ಮುಕ್ತ ಚರ್ಚೆ ಜರುಗಿತು.

ಬೆಂಗಳೂರಿನಲ್ಲಿ ಜರುಗಿದ ನಮ್ಮ ಕೆರೆಗಳನ್ನು ರಕ್ಷಿಸಿ ಮತ್ತು ಹಿಂಪಡೆಯುವ ಸಂವಾದ ಕಾರ್ಯಕ್ರಮದಲ್ಲಿ  ಕೆರೆಗಳ ಸಂರಕ್ಷಣೆ ಹಾಗೂ ನಿರ್ವಹಣೆಗೆ ಶಾಶ್ವತ ಸಂಸ್ಥೆ ಅಥವಾ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರ ಮುಂದಾಗಬೇಕೆಂಬ ಸಲಹೆ ನಗರ ತಜ್ಞರ, ಪರಿಸರವಾದಿಗಳಿಂದ ಕೇಳಿಬಂದವು.

ನಮ್ಮ ಕೆರೆಗಳನ್ನು ರಕ್ಷಿಸಿ ಮತ್ತು ಹಿಂಪಡೆಯುವ ಸಂವಾದದಲ್ಲಿ  ವಿಧಾನ ಸಭೆಯ ಅಧ್ಯಕ್ಷ  ಕೆ.ಬಿ.ಕೋಳಿವಾಡ, ಸ್ವಾತಂತ್ರ್ಯ ಹೋರಾಟಗಾರ  ಹೆಚ್.ಎಸ್. ದೊರೆಸ್ವಾ ಮಿ, ಭೂ  ಒತ್ತುವರಿ  ತಡೆ ಕ್ರಿಯಾ ಸಮಿತಿ ಸಂಚಾಲಕ ಎ.ಟಿ. ರಾಮಸ್ವಾಮಿ , ನಿವೃತ್ತ ಎಐಎಸ್ ಅಧಿಕಾರಿ ವಿ.ಬಾಲಸುಬ್ರಮಣಿಯನ್, ಸೇರಿದಂತೆ ನಗರ ತಜ್ಞರು, ಪರಿಸರವಾದಿಗಳು, ನಾಗರೀಕರು ಭಾಗಿಯಾಗಿದ್ದರು.

ಈ ವೇಳೆ  ಹಣದಾಸೆಗೆ  ಕುಡಿಯುವ ನೀರನ್ನು ಕಲುಷಿತಗೊಳಿಸುವ, ನಕಲಿ ದಾಖಲೆ ಸೃಷ್ಟಿಸುವ ಆಡಳಿತ ವರ್ಗ, ಬಿಲ್ಡರ್ ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ಬೆಳಂದೂರು ಕೆರೆ, ಬೈರಸಂದ್ರ ಕೆರೆ, ಅಲಸೂರು ಕೆರೆ ಸೇರಿದಂತೆ ಬೆಂಗಳೂರಿನಲ್ಲಿರುವ ಕೆರೆಗಳ ರಕ್ಷಣೆಗೆ ಜನರಲ್ಲಿಯೇ ಜಾಗೃತಿ ಮೂಡಬೇಕು. ಕಲುಷಿತಗೊಂಡ ಕೆರೆಯ ನೀರನ್ನು ಪುನರ್ಬಳಕೆ ಮಾಡಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ಆಗಬೇಕು. ಅದರಲ್ಲೂ ವರದಿ ನೀಡುವ ನೆಪದಲ್ಲಿ  ಕಾಲಹರಣ ಮಾಡುತ್ತಿರುವ ಸಮಿತಿಗಳ ಹಿಂಪಡೆದು ಶಾಶ್ವತ ಸಂಸ್ಥೆ ಅಥವಾ ಪ್ರಾಧಿಕಾರ ರಾಜ್ಯ ಸರ್ಕಾರ ರಚನೆ ಮಾಡಬೇಕು ಎಂಬ ಒತ್ತಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಿಂದ ಕೇಳಿಬಂದಿತು.

ಸಂವಾದದಲ್ಲಿ  ಕೇಳಿಬಂದ ಅಭಿಪ್ರಾಯ ಸಲಹೆಯನ್ನು ತಾವೂ ಸಿದ್ದಪಡಿಸಿರುವ ವರದಿಯಲ್ಲಿ  ಸೇರಿಸಲಾಗುವುದಾಗಿ ವಿಧಾನಸಭೆಯ ಸಭಾಧ್ಯಕ್ಷ ಹಾಗೂ ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷರೂ ಆಗಿರುವ ಕೆ.ಬಿ.ಕೋಳಿವಾಡ ಭರವಸೆ ನೀಡಿದರು.

ಇದೇ ವೇಳೆ ಬೆಂಗಳೂರಿನಲ್ಲಿರುವ ಕೆರೆಗಳ ಇತಿಹಾಸ , ರಕ್ಷಣೆಯ ಜವಾಬ್ದಾರಿ ಹೊತ್ತ ಸಂಬಂಧಪಟ್ಟ  ಇಲಾಖೆಯ ಅಧಿಕಾರಿಗಳ ಮಾಹಿತಿ ಬಗ್ಗೆ  ಸಂವಾದ ಕಾರ್ಯಕ್ರಮದಲ್ಲಿ  ನಗರ ತಜ್ಞರು, ನಮ್ಮ ಬೆಂಗಳೂರು ಪೌಂಡೇಷನ್ ನಿಂದ ಪ್ರಾತ್ಯಕ್ಷಿಕೆ ನೀಡಲಾಯಿತು. ಜೊತೆಗೆ ನಮ್ಮ ನಗರದಲ್ಲಿರುವ ಕೆರೆಗಳನ್ನ ಉಳಿಸಿ ,ಅಭಿವೃದ್ಧಿ ಪಡೆಸುವ ಕುರಿತು ಇಂದು ನಡೆದ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ನಾಗರೀಕರು, ಪರಿಸರವಾದಿಗಳು, ನಗರ ತಜ್ಞರು ಒಟ್ಟಾಗಿ ಕಾರ್ಯನಿರ್ವಹಿಸುವ ಪ್ರತಿಜ್ಞೆ ಕೂಡಾ ಮಾಡಲಾಯಿತು.

Follow Us:
Download App:
  • android
  • ios