ಯುನೈಟೆಡ್ ಬೆಂಗಳೂರು ಸಂಸ್ಥೆಯು ಮೇ 13, ಶನಿವಾರದಂದು ಟೌನ್'ಹಾಲ್'ನಲ್ಲಿ ಚರ್ಚಾ ಕಾರ್ಯಕ್ರಮ ಏರ್ಪಡಿಸಿದೆ. ಸಿಟಿಜನ್ಸ್ ಫಾರ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಸಿಟಿಜನ್ ಆ್ಯಕ್ಷನ್ ಫೋರಮ್, ಫಾರ್ವರ್ಡ್ ಫೌಂಡೇಶನ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪ್ರಜಾ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅಲ್ಲದೇ, ನಗರದ ಪರಿಸರವಾದಿಗಳು, ಕೆರೆ ಪುನಶ್ಚೇತನ ಹೋರಾಟಗಾರರು, ಇನ್ನೂ ಅನೇಕ ನಾಗರಿಕ ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿವೆ.

ಬೆಂಗಳೂರು(ಮೇ 12): ಈ ನಗರ ಕೆಲ ದಶಕಗಳ ಹಿಂದಿನವರೆಗೂ ಕೆರೆಗಳ ನಗರವೆಂದೆನಿಸಿಕೊಂಡಿತ್ತು. ನಗರ ಬೆಳೆದಂತೆಲ್ಲಾ ಕೆರೆಗಳ ಅತಿಕ್ರಮಣವಾಗಿ ಝಗಮಗಿಸುವ ಲೇಔಟ್'ಗಳಾಗಿವೆ. ಕೆರೆಗಳಿಲ್ಲದಿರುವುದರಿಂದ ಬೆಂಗಳೂರಿನ ಅಂತರ್ಜಲ ಬರಿದಾಗಿದೆ. ಸ್ವಲ್ಪ ಮಳೆ ಬಂದರೂ ಪ್ರವಾಹ ಪರಿಸ್ಥಿತಿ ಎದುರಾಗುವಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ವರ್ಷವಿಡೀ ಏರ್'ಕಂಡೀಶನರ್ ರೀತಿಯ ವಾತಾವರಣ ಹೊಂದಿದ್ದ ಬೆಂಗಳೂರಿನಲ್ಲಿ ಬಿಸಿಲಿನ ಬೇಗೆಯಿಂದ ಜನರು ಬೇಯುವಂತಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ನಗರವನ್ನು ಶತಾಯಗತಾಯ ಉಳಿಸಿಕೊಳ್ಳುವ ತುರ್ತು ಸಂದರ್ಭ ಬಂದಿದೆ. ಕೆರೆಗಳ ಪುನಶ್ಚೇತನ ಹಾಗೂ ಸಂರಕ್ಷಣೆ ನಡೆಸುವ ಬಗ್ಗೆ ನಾಗರಿಕರಿಂದ ಚರ್ಚಾಕೂಟವನ್ನು ಏರ್ಪಡಿಸಲಾಗಿದೆ.

ಯುನೈಟೆಡ್ ಬೆಂಗಳೂರು ಸಂಸ್ಥೆಯು ಮೇ 13, ಶನಿವಾರದಂದು ಟೌನ್'ಹಾಲ್'ನಲ್ಲಿ ಚರ್ಚಾ ಕಾರ್ಯಕ್ರಮ ಏರ್ಪಡಿಸಿದೆ. ಸಿಟಿಜನ್ಸ್ ಫಾರ್ ಬೆಂಗಳೂರು, ನಮ್ಮ ಬೆಂಗಳೂರು ಫೌಂಡೇಶನ್, ಸಿಟಿಜನ್ ಆ್ಯಕ್ಷನ್ ಫೋರಮ್, ಫಾರ್ವರ್ಡ್ ಫೌಂಡೇಶನ್, ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪ್ರಜಾ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ. ಅಲ್ಲದೇ, ನಗರದ ಪರಿಸರವಾದಿಗಳು, ಕೆರೆ ಪುನಶ್ಚೇತನ ಹೋರಾಟಗಾರರು, ಇನ್ನೂ ಅನೇಕ ನಾಗರಿಕ ಸಂಘಟನೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿವೆ.

ಚರ್ಚಾ ವಿಷಯ: ಕೆರೆಗಳ ಪುನಶ್ಚೇತನ ಮತ್ತು ರಕ್ಷಣೆ
ಸ್ಥಳ: ಟೌನ್ ಹಾಲ್, ಬೆಂಗಳೂರು
ಸಮಯ: ಮೇ 13, ಬೆಳಗ್ಗೆ 10ಗಂಟೆಯಿಂದ