ಸರ್ಕಾರ ಎಲ್ಲಾ ಗ್ರಾಮ ಪಂಚಾಯ್ತಿ ಕಛೇರಿಗಳ ಮುಂದೆ ಪ್ರತಿದಿನ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಬೇಕೆಂಬ ನಿಯಮ ಜಾರಿಗೆ ತಂದ ಮೇಲೆ ಧ್ವಜ್ಕಕೆ ಸಂಬಂಧಿಸಿದ ಅವಾಂತರಗಳು ಆಗುತ್ತಲೇ ಇವೆ. ಇದೀಗ ಅಂತದ್ದೇ ಅದ್ವಾನವೊಂದು ಮೈಸೂರುನಲ್ಲಿ ನಡೆದಿದೆ.

ಮೈಸೂರು(ಜು.11): ಸರ್ಕಾರ ಎಲ್ಲಾ ಗ್ರಾಮ ಪಂಚಾಯ್ತಿ ಕಛೇರಿಗಳ ಮುಂದೆ ಪ್ರತಿದಿನ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಬೇಕೆಂಬ ನಿಯಮ ಜಾರಿಗೆ ತಂದ ಮೇಲೆ ಧ್ವಜ್ಕಕೆ ಸಂಬಂಧಿಸಿದ ಅವಾಂತರಗಳು ಆಗುತ್ತಲೇ ಇವೆ. ಇದೀಗ ಅಂತದ್ದೇ ಅದ್ವಾನವೊಂದು ಮೈಸೂರುನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗಾಗೇನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಮುಂಭಾಗ ಕಳೆದ 15 ದಿನಗಳಿಂದ ಸತತವಾಗಿ ಹರಿದು ಹೋಗಿರುವ ತ್ರಿವರ್ಣ ಧ್ವಜವನ್ನೇ ಹಾರಿಸಲಾಗುತ್ತಿದೆ. ರಾಷ್ಟ್ರ ಧ್ವಜಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಗ್ರಾಮಸ್ಥರು, ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ರಾಷ್ಟ್ರ ಧ್ವಜಕ್ಕೆ ಕನಿಷ್ಠ ಗೌರವ ಕೊಡಲಾಗದ ಪಂಚಾಯಿತಿ ಕಚೇರಿ ಗಳ ಮುಂದೆ ದಿನ ನಿತ್ಯ ರಾಷ್ಟ್ರ ಧ್ವಜ ಹಾರಿಸಬೇಕಾದ ಔಚಿತ್ಯವನ್ನೇ ಜನ‌ ಪ್ರಶ್ನಿಸುವಂತಾಗಿದೆ.