Asianet Suvarna News Asianet Suvarna News

ಕನ್ನಡಕ್ಕೆ ಅವಮಾನಿಸಿ ದೆಹಲಿ ದೌಲತ್ತು ತೋರಿಸಿದ ವ್ಯಕ್ತಿಗೆ ಆಗಿದ್ದೇನು ಗೊತ್ತಾ?

ಆತ ಕೆಲಸಕ್ಕಾಗಿ ದೂರದ ದೆಲ್ಲಿಯಿಂದ ಬಂದಿದ್ದವನು. ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಯೂರಿದ್ದರೂ, ಕನ್ನಡಕ್ಕೆ, ಕರುನಾಡಿನ ಸಂಸ್ಕೃತಿಗೆ ಕನಿಷ್ಟ ಮರ್ಯಾದೆ ಕೊಡುವುದನ್ನೂ ಕಲಿತಿರಲಿಲ್ಲ. ಕನ್ನಡಕ್ಕೆ ಅವಮಾನಿಸಿ ದೆಹಲಿ ದೌಲತ್ತು ತೋರಿಸಿದ್ದಾನೆ.

Insult to Kannada
  • Facebook
  • Twitter
  • Whatsapp

ಬೆಂಗಳೂರು (ಜೂ.24): ಆತ ಕೆಲಸಕ್ಕಾಗಿ ದೂರದ ದೆಲ್ಲಿಯಿಂದ ಬಂದಿದ್ದವನು. ಹಲವು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಯೂರಿದ್ದರೂ, ಕನ್ನಡಕ್ಕೆ, ಕರುನಾಡಿನ ಸಂಸ್ಕೃತಿಗೆ ಕನಿಷ್ಟ ಮರ್ಯಾದೆ ಕೊಡುವುದನ್ನೂ ಕಲಿತಿರಲಿಲ್ಲ. ಕನ್ನಡಕ್ಕೆ ಅವಮಾನಿಸಿ ದೆಹಲಿ ದೌಲತ್ತು ತೋರಿಸಿದ್ದಾನೆ.

ಸಾತ್ವಿಕ್ ಸಚ್ಚಾರ್ ಎನ್ನುವ ದೆಹಲಿ ಮೂಲದ ವ್ಯಕ್ತಿ ಕಳೆದ 5 ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಹೆಚ್​​ಆರ್​ ಮ್ಯಾನೆಜರ್​ ಆಗಿ ಕೆಲಸ ಮಾಡುತ್ತಿದ್ದಾನೆ. ಇವನು ನೋಡೋಕೆ ಸುರಸುಂದರಾಂಗನ ಹಾಗೆ ಕಂಡರೂ ಇವನ ಮನಸ್ಸು ಮಾತ್ರ ವಿಕೃತ. ಸಾತ್ವಿಕ್​​ ಜೂನ್​​ 18ರಂದು ಆನ್’ಲೈನ್ ಪುಡ್ ಆರ್ಡರ್ ಮಾಡಿದ್ದ. ಡಿಲೆವರಿಗೆ ಐದು ನಿಮಿಷ ತಡವಾಗಿ ಬಂದಿದ್ದಕ್ಕೆ ಅನಿಲ್​ಗೆ ಬಾಯಿಗೆ ಬಂದಂತೆ ನಿಂದಿಸಲು ಶುರು ಮಾಡಿದ್ದಾನೆ. ಅನಿಲ್​ ಕನ್ನಡದಲ್ಲಿ ಮಾತನಾಡಿದ ಅನ್ನೋ ಕಾರಣಕ್ಕೆ ಕನ್ನಡದ ಬಗ್ಗೆಯೂ ತೀರಾ ನಿಕೃಷ್ವವಾಗಿ ನಿಂದಿಸಿ ಅವಮಾನ ಮಾಡಿದ್ದಾನೆ.

ಸಾತ್ವಿಕ್ ಕನ್ನಡದ ಬಗ್ಗೆ ತುಚ್ಚವಾಗಿ ಬೈದಿದ್ದರಿಂದ ಬೇಸರಗೊಂಡ ಅನಿಲ್​​ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಪಿಸಿ ಸೆಕ್ಷನ್ 153(ಎ), 504 ಅಡಿಯಲ್ಲಿ ಎಫ್​ಐಆರ್​ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೂ ಅವಾಜ್​ ಹಾಕಿ ದುರಹಂಕಾರ ತೋರಿದ್ದಾನೆ. ಕನ್ನಡಪರ ಸಂಘಟನೆಗಳು ಒಂದಾಗಿ ಕ್ರಮಕ್ಕೆ ಒತ್ತಾಯಿಸುತ್ತಿದ್ದಂತೆ ಸಾತ್ವಿಕ್​ಗೆ ತನ್ನ ತಪ್ಪಿನ ಅರಿವಾಗಿದೆ. ಕನ್ನಡಿಗರಿಗೆ ಇನ್ನೆಂದೂ ಅವಮಾನಿಸುವುದಿಲ್ಲ ಕ್ಷಮಾ ಪತ್ರ ಬರೆದುಕೊಟ್ಟಿದ್ದಾನೆ.

ಬಂಧಿಸಿ ಕೋರ್ಟ್​​ ಮುಂದೆ ಹಾಜರು ಪಡಿಸಿದಾಗ ವಿಚಾರಣೆ ನಡೆಸಿದ ನ್ಯಾಯಾಧೀಶರು ಇನ್ನೆಂದೂ ಇಂತಹ ಕೃತ್ಯ ಎಸಗಬೇಡಿ ಎಂದು ಎಚ್ಚರಿಕೆ ನೀಡಿ ಜಾಮೀನು ನೀಡಿದೆ. ಅದೇನೆ ಇರಲಿ ಕನ್ನಡದ ನೆಲದ ಅನ್ನ ತಿಂದು, ಕನ್ನಡ ನೆಲದ ನೀರು ಕುಡಿದು ಬದುಕುವ ಇಂಥಹ ದುರಂಕಾರಿಗಳಿಗೆ ಇದೊಂದು ತಕ್ಕಪಾಠ. ಅನ್ಯರಾಜ್ಯದಿಂದ ಬಂದು ಇಲ್ಲಿನ ಭಾಷೆ ಕಲಿಯುವ ಪ್ರಯತ್ನ ಮಾಡದಿದ್ದರೂ, ಕನ್ನಡವನ್ನ ಅಭಿಮಾನಿಸಿ ಅನ್ನೋದು ಕನ್ನಡಿಗರ ಕಿವಿಮಾತು. 

-ಸಾಂದರ್ಭಿಕ ಚಿತ್ರ

Follow Us:
Download App:
  • android
  • ios