ಬೆಂಗಳೂರು (ಮಾ. 04): ಮಹಿಳೆಯರು ಋತುಸ್ರಾವದಂಥ ಸಂದರ್ಭದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬಳಕೆ ಮಾಡ್ತಾರೆ. ಆದರೆ, ಇದಕ್ಕಾಗಿ ಹೆಚ್ಚು ಹಣ ವ್ಯಯ ಮಾಡಬೇಕಾದ  ಅನಿವಾರ್ಯತೆ ಎದುರಾಗುತ್ತೆ.

ಮಹಿಳೆಯರ ಇಂಥ ಸಮಸ್ಯೆಗಳನ್ನು ದೂರ ಮಾಡಲೆಂದೇ ಬ್ರಿಟನ್ ಮೂಲದ ‘ವುಕಾ’ ಎಂಬ ಕಂಪನಿ ಮುಟ್ಟಿನಂಥ ಸಂದರ್ಭದಲ್ಲಿಯೂ ನ್ಯಾಪ್‌ಕಿನ್ ಬಳಸದೇ, ಮತ್ತು ಪುನಃ ಬಳಸಬಹುದಾದ  ಒಳ ತೊಡುಗೆಯೊಂದನ್ನು ಸಿದ್ಧಪಡಿಸಿದೆ. ಆದ್ರೆ, ಇದರ
ಬೆಲೆ ಮಾತ್ರ(೩೦ ಪೌಂಡ್) ಸುಮಾರು 2700 ರೂ ಆಗಲಿದೆ. ಬ್ರಿಟನ್‌ನಂಥ ರಾಷ್ಟ್ರಗಳಲ್ಲಿ ಮಹಿಳೆಯರು ಸ್ಯಾನಿಟರಿ ನ್ಯಾಪ್‌ಕಿನ್ ಸೇರಿದಂತೆ ಇತರ  ಸಾಮಗ್ರಿಗಳಿಗಾಗಿ ಸುಮಾರು 1,35000 ರು. ವೆಚ್ಚ ಮಾಡ್ತಾರೆ. ಆದ್ರೆ, ಭಾರತದಂಥ ರಾಷ್ಟ್ರಗಳಿಗೆ ಈ ಒಳ ಉಡುಪಿನ ಬೆಲೆ ದುಬಾರಿಯಾಗಿಯೇ ಕಾಣಲಿದೆ.